ದಾಂಡೇಲಿಯಲ್ಲಿ 6 ಮಾಂಸದಂಗಡಿ ಸೀಜ್

12dnd2 a
Published on

ದಾಂಡೇಲಿ: ನಗರದಲ್ಲಿ ಪಾಸ್ ಒದಗಿಸಿ ವಾರ್ಡ್​ಗಳಲ್ಲಿ ದವಸ, ಧಾನ್ಯ, ತರಕಾರಿ, ಮೀನು, ಮಟನ್ ಮಾರಾಟ ಮಾಡಲು ಅನುವು ಮಾಡಿಕೊಟ್ಟರೂ ಕೆಲ ಕಿರಾಣಿ ಅಂಗಡಿಗಳು, ಮಿನು ಮಾಂಸದ ಅಂಗಡಿಗಳು, ಲಿಂಕ್ ರಸ್ತೆ, ಸಂಡೇ ಮಾರುಕಟ್ಟೆಯಲ್ಲಿ ಯಾವ ಭಯವಿಲ್ಲದೆ ಭಾನುವಾರ ತೆರೆದಿದ್ದವು.

ಗ್ರಾಹಕರಿಗೆ ವಸ್ತುಗಳನ್ನು ಮಾರಾಟ ಮಾಡುವ ವೇಳೆ ಭೇಟಿ ನೀಡಿದ ನಗರದ ಪೌರಾಯುಕ್ತ ಡಾ. ಸೈಯದ್ ಜಾಹೇದ ಅಲಿ ಹಾಗೂ ತಹಸೀಲ್ದಾರ್ ಶೈಲೇಶ ಪರಮಾನಂದ ಅವರು ಒಟ್ಟು 6 ಅಂಡಿಗಳನ್ನು ಸೀಜ್ ಮಾಡಿದ್ದಾರೆ. ಜತೆಗೆ ಇದೇ ರೀತಿ ನಿಯಮ ಉಲ್ಲಂಘಿಸಿದರೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು ಎಂದು ಅಂಗಡಿಕಾರರಿಗೆ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net