ದಾಂಡೇಲಿ ನಗರಸಭೆಯಿಂದ ಗುಜರಿ ವಾಹನ ಜಪ್ತಿ

27DND2
Published on

ದಾಂಡೇಲಿ: ನಗರದಲ್ಲಿ ಕಂಡಕಂಡಲ್ಲಿ ನಿಲ್ಲಿಸಲಾಗುತ್ತಿದ್ದ ಉಪಯೋಗಕ್ಕೆ ಬಾರದ ಗುಜರಿ ವಾಹನಗಳನ್ನು ನಗರಸಭೆ ಜಪ್ತಿ ಮಾಡಿದೆ.ವಾಹನ ಮಾಲೀಕರಿಗೆ ತೆರವು ಗೊಳಿಸುವ ಕುರಿತು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್​ಗೆ ಸ್ಪಂದಿಸದ ಮಾಲೀಕರ ವಾಹನಗಳನ್ನು ಪಟೇಲನಗರದ ಪಂಪ್​ಹೌಸ್ ಆವರಣಕ್ಕೆ ಸ್ಥಳಾಂತರ ಮಾಡಿದೆ. ಶುಕ್ರವಾರ 1 ಟ್ರ್ಯಾಕ್ಟರ್ ಹಾಗೂ 2 ಟಾಟಾ ಎಸ್ ಗುಜರಿ ವಾಹನಗಳನ್ನು ನಗರಸಭೆ ವಶಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net