

ಚಿಂಚೋಳಿ: ಪ್ರತಿಯೊಬ್ಬರು ಸಾಧನೆ ಶಿಖರ ಹತ್ತಬೇಕಾದರೆ, ಕಠಿಣ ಶ್ರಮ, ಶೃದ್ಧೆ ಅತಿ ಅವಶ್ಯವಾಗಿದೆ ಎಂದು ಬಾಮ್ ಸೇಫ್ ಸಂಘಟನೆ ರಾಜ್ಯ ಕಾರ್ಯದರ್ಶಿ ಮಾರುತಿ ಗಂಜಗೇರಾ ಹೇಳಿದರು.
ತಾಲೂಕಿನ ದಸ್ತಾಪೂರ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಯು ಆಯೋಜಿಸಿದ ಕುರಿ ಸಾಕಾಣಿಕೆ ವಿಧಾನದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣವು ಉದ್ಯೋಗ ಪಡೆದುಕೊಳ್ಳಲು ಮಾತ್ರ ಸೀಮಿತಗೊಳಿಸದೇ ಬದುಕು ಕಟ್ಟಿಕೊಳ್ಳಲು ಒಂದು ಮೆಟ್ಟಿಲು ಎಂಬುದು ಅರಿಯಬೇಕು ಎಂದರು.
ನಿರುದ್ಯೋಗಿಗಳಿಗೆ, ಬಡವರಿಗೆ, ರೈತರಿಗೆ, ಸರಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರಾಷ್ಟ್ರಿಕೃತ ಬ್ಯಾಂಕ ಹಲವು ಸೌಲಭ್ಯಗಳು ಕಲ್ಪಿಸುತ್ತಿದ್ದು, ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಕುರಿ ಮತ್ತು ಇನ್ನಿತರ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಸಮಾಜದಲ್ಲಿ ಆದರ್ಶಮಯ ಬದುಕು ರೂಪಿಸಿಕೊಳ್ಳಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಗೈಬಣ್ಣ ವಾಲಿಕಾರ, ಅರ್ಜುನರಾವ, ಭಾರತಿ, ಗ್ರಾ ಪಂ ಸದಸ್ಯ ಇಮಾಮ್ ಪಟೇಲ, ಗ್ರಾ.ಪಂ ಕಾರ್ಯದರ್ಶಿ ನಾಗೇಂದ್ರಪ್ಪ, ರವಿ ಪೂಜಾರಿ, ಧನರಾಜ ಹಿರೇಮಠ, ಗೋಪಾಲ ಗಾರಂಪಳ್ಳಿ, ವಿಶ್ವನಾಥ್, ಅಂಜುಮ್, ಅಜರಾ ಬೇಗಂ, ಸುಲೋಚನ, ಶಿವಲೀಲಾ ಸೇರಿದಂತೆ ಅನೇಕರು ಇದ್ದರು.