ದಸರೆಗೆ ಪ್ರಧಾನಿ ಬರುತ್ತಾರೋ, ಇಲ್ಲವೋ ಎಂಬುದು ಗೊತ್ತಿಲ್ಲ!

PM Modi
Published on

ಮೈಸೂರು: ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೋ ಅಥವಾ ಇಲ್ಲವೋ ಎಂಬ ನಿಖರ ಮಾಹಿತಿ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

‘ದಸರಾ ಜಂಬೂ ಸವಾರಿಗೆ ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುತ್ತಾರೆ’ ಎಂಬ ಸುದ್ದಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಯೋಗ ದಿನಕ್ಕೆ ಬಂದಾಗಲೇ ಪ್ರಧಾನಿ ಮೋದಿ ಅವರು ದಸರಾ ನೋಡುವ ಇಚ್ಛೆ ಮತ್ತು ಆಸೆ ವ್ಯಕ್ತಪಡಿಸಿದ್ದರು. ಈ ಕಾರಣ ದಸರಾ ಕಾರ್ಯಕ್ರಮ ಬಗ್ಗೆ ತಿಳಿಯಲು ಪ್ರಧಾನಿ ಕಾರ್ಯಾಲಯದಿಂದ ಮುಖ್ಯ ಕಾರ್ಯದರ್ಶಿಗೆ ಫೋನ್ ಕರೆ ಬಂದಿತ್ತು. ಆದರೆ, ಪ್ರಧಾನಿ ಬರುತ್ತಾರೋ, ಇಲ್ಲವೋ ಎಂಬುದು ಗೊತ್ತಿಲ್ಲ ಎಂದರು.

ಯೋಗ ದಿನಕ್ಕೆ ಪ್ರಧಾನಿ ಅವರು ಮೈಸೂರಿಗೆ ಬಂದಾಗ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಮಾಡಿದ್ದರು. ಆಗ ಮತ್ತೊಮ್ಮೆ ದರ್ಶನಕ್ಕೆ ಬರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ದಸರಾ ವೇಳೆ ತಾಯಿ ದರ್ಶನ ಇನ್ನೂ ವಿಶೇಷ. ಹೀಗಾಗಿ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಪಡೆಯಲಾಗಿದೆ. ದಸರಾ ಸಿದ್ಧತೆ ಹೇಗಿದೆ, ಪ್ರಧಾನಿಯವರು ದಸರಾಗೆ ಬರುವುದಾದರೆ ಯಾವಾಗ ಬಂದರೆ ಉತ್ತಮ ಎಂಬ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು.

ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಬರುತ್ತಿರುವ ಕಾರಣ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net