ದಸರಾಕ್ಕೆ ಆಗ್ರಹಿಸಿ ಜು.7 ರಂದು ವಿನೂತನ ಪ್ರತಿಭಟನೆ

IMG_20250702_165653
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;
Published on

ಚಾಮರಾಜನಗರ: ಈ ಬಾರಿಯೂ ಚಾಮರಾಜನಗರ ದಸರಾ ಮಹೋತ್ಸವವನ್ನು ಆಯೋಜಿಸುವಂತೆ ಆಗ್ರಹಿಸಿ ಜು.7 ರಂದು ವಿನೂತನ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಯಿತು.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಕಲಾವಿದರ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಕಲಾವಿದರು ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮ ಮಾಡಲ್ಲ ಅಂತ ಹೇಳಿರುವುದು ಅತ್ಯಂತ ಖಂಡನೀಯ. ಜಿಲ್ಲೆಯಲ್ಲೇ ದಸರಾ ಮಹೋತ್ಸವ ನಡೆದರೇ ಕಲಾವಿದರಿಗೆ ಅನುಕೂಲವಾಗಲಿದೆ. ಪ್ರೇಕ್ಷಕರಿಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಅವಕಾಶ ದೊರೆಯಲಿದೆ ಎಂದರು.

ಮೈಸೂರಿನ ಭಾಗವೇ ಆಗಿರುವ ಚಾಮರಾಜನಗರದಲ್ಲಿ ದಸರಾ ಮಹೋತ್ಸವವನ್ನು ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಜು.7 ರಂದು ವಿನೂತನ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿ ಹಲವು ಕಲಾ ಪ್ರಕಾರಗಳ ಮೆರವಣಿಗೆ ಮೂಲಕ ಶ್ರೀ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಹಿರಿಯ ರಂಗಕರ್ಮಿ ಸೋಮಶೇಖರ್ ಬಿಸಲವಾಡಿ, ಮಂಗಲ ಶಿವಣ್ಣ, ಸಿ.ಎಂ.ನರಸಿಂಹಮೂರ್ತಿ, ಉಮ್ಮತ್ತೂರು ಚಂದ್ರು, ಶಾಂತರಾಜು, ಜನಪದ ಮಹೇಶ್, ಕಲೆ ನಟರಾಜ್, ಶಿವು, ಅವತಾರ್ ಪ್ರವೀಣ್, ಕೈಲಾಶ್ ಮೂರ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೊನ್ನಮ್ಮ, ಚಿನ್ನಮ್ಮ, ಮಹದೇವಮ್ಮ, ಗುರುರಾಜ್, ದಡದಹಳ್ಳಿ ರಮೇಶ್, ಮಹದೇವ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net