ದಸರಾ ರಜೆ ಜಾರಿಗೊಳಿಸಲು ಶ್ರೀರಾಮಸೇನಾ ಮನವಿ

ದಸರಾ ರಜೆ ಜಾರಿಗೊಳಿಸಲು ಶ್ರೀರಾಮಸೇನಾ ಮನವಿ
Published on

ಹಾಸನ:ದಸರಾ ರಜೆಯಲ್ಲಿ ಖಾಸಗಿ ಶಾಲೆಗಳು ತರಗತಿ, ಪರೀಕ್ಷೆ ನಡೆಸುತ್ತಿವೆ. ಖಾಸಗಿ ಶಾಲೆಗಳಿಲ್ಲಿ ಕಡ್ಡಾಯವಾಗಿ ದಸರಾ ರಜೆ ಘೋಷಸಬೇಕು ಎಂದು ಶ್ರೀರಾಮಸೇನಾ ಜಿಲ್ಲಾ ಘಟಕದಿಂದ ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.
ಶ್ರೀರಾಮಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಹೇಮಂತ್ ಜಾನೆಕೆರೆ ಸುದ್ದಿಗಾರರೊಂದಿಗೆ ಮಾತನಾಡಿ, ಹಲವಾರು ವರ್ಷಗಳಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳು ದಸರಾ ನಿಮಿತ್ತ ರಜೆ ನೀಡುವುದು ಪರಂಪರೆಯಿಂದ ನಡೆದುಕೊಂಡು ಬಂದಿದೆ. ಆದರೆ ಕೆಲ ಖಾಸಗಿ ಶಾಲೆಗಳು ರಜೆ ನೀಡಿಲ್ಲ. ಸಾಕಷ್ಟು ಪೋಷಕರು ಇದರ ಬಗ್ಗೆ ನಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದರು.
ಇದು ಧರ್ಮ ವಿರೋಧಿ ನೀತಿ ಹಾಗೂ ಸಂವಿಧಾನದತ್ತ ಅಧಿಕಾರದ ಹನನವಾಗಿದೆ. ಮಕ್ಕಳು ಸ್ವಚ್ಛಂದವಾಗಿ ಹಬ್ಬದ ಧಾರ್ಮಿಕ, ಆಧ್ಯಾತ್ಮಿಕ, ಕೌಟುಂಬಿಕ, ಸಾಂಸ್ಕೃತಿಕ ಮೌಲ್ಯ, ಸಂತಸ ಅನುಭವಿಸಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ತಕ್ಷಣವೇ ಎಲ್ಲ ಶಾಲೆಗಳಿಗೆ ರಜೆ ಘೋಷಣೆ ಮಾಡಬೇಕು. ಯಾರಾದರೂ ಉಲ್ಲಂಘಿಸಿದರೆ ಮುಲಾಜಿಲ್ಲದೆ ಶಾಲೆಯ ಅನುಮತಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಇದೆ ವೇಳೆ ಶ್ರೀರಾಮ ಸೇನೆ ಗೌರವಾಧ್ಯಕ್ಷ ಎಡೆಯೂರು ಕುಮಾರ್, ತಾಲೂಕು ಅಧ್ಯಕ್ಷ ಪ್ರದೀಪ್, ಜಿಲ್ಲಾ ಕಾರ್ಯದರ್ಶಿ ಧರ್ಮ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net