ದಸರಾ ಬನ್ನಿಮಂಟಪಕ್ಕೆ ಶಾಸಕ, ಡಿಸಿ ಭೇಟಿ

SRP _16-04 jpg
Published on

ಶ್ರೀರಂಗಪಟ್ಟಣ: ತಾಲೂಕಿನ ಮೈಸೂರು-ಬೆಂಗಳೂರು ಹೆದ್ದಾರಿಯ ಕಿರಂಗೂರು ವೃತ್ತದಲ್ಲಿನ ದಸರಾ ಬನ್ನಿಮಂಟಪಕ್ಕೆ ಗುರುವಾರ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.


ಪಾರಂಪರಿಕ ಶ್ರೀರಂಗಪಟ್ಟಣ ದಸರಾವನ್ನು ಈ ಭಾರಿ ವಿಜೃಂಭಣೆಯಿಂದ ಆಚರಿಸುವ ಸಂಬಂಧ ಪ್ರತ್ಯೇಕ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹೀಗಾಗಿ ದಸರಾ ಬನ್ನಿಮಂಟಪ ಅಭಿವೃದ್ಧಿ ದಸರಾ ಮೆರವಣಿಗೆಯ ದಿಬ್ಬಣ ಸಾಗುವ ಪ್ರಮುಖ ರಸ್ತೆ, ದಸರಾ ಮನರಂಜನೆ ಕಾರ್ಯಕ್ರಮ ನಡೆಯುವ ಸ್ಥಳ ಸೇರಿದಂತೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಶಾಸಕರು ಹಾಗೂ ಡಿಸಿ ಚರ್ಚಿಸಿದರು. ತಹಸೀಲ್ದಾರ್ ಅಶ್ವಿನಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net