

ಮೈಸೂರು: ದಸರಾ ಮಹೋತ್ಸವ-2025ರ ಆಹ್ವಾನ ಪತ್ರಿಕೆ ಪಾರಂಪರಿಕ ಶೈಲಿಯಲ್ಲಿ ಆಕರ್ಷಿಸುತ್ತಿದೆ.
ಆಹ್ವಾನ ಪತ್ರಿಕೆಯ ಮುಖಪುಟದಲ್ಲಿ ಅರಮನೆ, ಚಿನ್ನದ ಅಂಬಾರಿ ಹೊತ್ತ ಗಜಪಡೆಯ ಚಿತ್ರಗಳು ಗಮನಸೆಳೆಯುತ್ತಿವೆ.
ಸರ್ವಾಲಂಕೃತ ಚಾಮುಂಡೇಶ್ವರಿ, ಬೆಟ್ಟ, ನಂದಿ, ಪ್ರತಿ ಪುಟದಲ್ಲೂ ನಾಡಿನ ಶ್ರೀಮಂತಿಕೆಯ ಪ್ರತೀಕವಾದ ಕಲಾತಂಡಗಳ ಚಿತ್ರಗಳಿವೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಂದೇಶ, ಕೇಂದ್ರ, ರಾಜ್ಯ ಸರ್ಕಾರದ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು, ಸೆ. 22ರಿಂದ ಅ.2ರ ತನಕ ನಡೆಯುವ ವಿವಿಧ ಕಾರ್ಯಕ್ರಮಗಳ ಮಾಹಿತಿ ಇದೆ.
ದಸರಾ ಕಾರ್ಯಕ್ರಮಗಳ ವೇಳಾಪಟ್ಟಿ
ಸೆ.10 ರಿಂದ ಯುವ ಸಂಭ್ರಮ, ಸೆ.13ರಿಂದ ಚಲನಚಿತ್ರೋತ್ಸವ, ಸೆ.22ರಂದು ಫಲಪುಷ್ಪ, ಆಹಾರ ಮೇಳ, ದಸರಾ ಕುಸ್ತಿ, ಚಿತ್ರಕಲಾ ಶಿಬಿರ, ಪುಸ್ತಕ ಮೇಳ, ಯೋಗ ದಸರಾ, ಕ್ರೀಡಾಕೂಟ, ವಿದ್ಯುತ್ ದೀಪಾಲಂಕಾರ, ವಸ್ತುಪ್ರದರ್ಶನ, ಸೆ.23ರಂದು ರಂಗೋಲಿ ಸ್ಪರ್ಧೆ, ಪಂಚ ಕಾವ್ಯದೌತಣ ಪ್ರಭಾತ ಕವಿಗೋಷ್ಠಿ, ಮಹಿಳಾ ದಸರಾಕ್ಕೆ ಚಾಲನೆ. ಸೆ.24ರಂದು ಪ್ರಚುರ ಕವಿಗೋಷ್ಠಿ, 25ರಂದು ಪಾರಂಪರಿಕ ಸೈಕಲ್ ಸವಾರಿ, ಪ್ರಜ್ವಲ ಕವಿಗೋಷ್ಠಿ ನಡೆಯಲಿದೆ.
ಸೆ.26ರಂದು ಪಾರಂಪರಿಕ ನಡಿಗೆ, ರೈತ ದಸರಾ ಮೆರವಣಿಗೆ, ಪ್ರತಿಭಾ ಕವಿಗೋಷ್ಠಿ, ಕೃಷಿ ವಸ್ತುಪ್ರದರ್ಶನ, ರೈತ ದಸರಾ, ಕರಕುಶಲ, ಚಿತ್ರಕಲಾ ಪ್ರದರ್ಶನ, 27ರಂದು ಹಾಲು ಕರೆಯುವ ಸ್ಪರ್ಧೆ, ಪಾರಂಪರಿಕ ನಡಿಗೆ, ದಸರಾ ಯೋಗಾಸನ, ಪ್ರಬುದ್ಧ ಕವಿಗೋಷ್ಠಿ. ಸೆ. 28ರಂದು ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ, ಕಲಾ ಜಾತ್ರೆಯನ್ನು ಆಯೋಜಿಸಲಾಗಿದೆ.