

ಗುಳೇದಗುಡ್ಡ: ಪಟ್ಟಣದಲ್ಲಿ ಅಶೋಕ ಹೆಗಡೆ ಅವರು 10 ವರ್ಷಗಳಿಂದ ಬಗೆ ಬಗೆಯ ಕಲಾತ್ಮಕ ಗೊಂಬೆಗಳನ್ನು ಕೂಡಿಸಿ ದಸರಾ ಗೊಂಬೆ ಪ್ರದರ್ಶ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ. ಇಂಥಹ ಕಲೆ ಆಚರಣೆ, ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದು ದೀಪಾ ಶೀಲವಂತ ಹೇಳಿದರು.ಪಟ್ಟಣದ ಮುಕ್ತಾ ಅಶೋಕ ಹೆಗಡೆ ನಿವಾಸದಲ್ಲಿ ನಡೆಯುವ ದಸರಾ ಮಹೋತ್ಸವದಂಗವಾಗಿ ಮೂರು ದಿನಗಳವರೆಗೆ ನಡೆಯಲಿರುವ ದಸರಾ ಗೊಂಬೆ ಪ್ರದರ್ಶನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಲೆಗೆ ವಿಶೇಷ ಬೆಲೆ ಇದೆ. ಅದರಲ್ಲೂ ದಸರಾ ಗೊಂಬೆ ಪ್ರದರ್ಶನ ಅಪರೂಪದ ಆಚರಣೆಯಾಗಿದೆ ಎಂದರು.
ಭಾಗ್ಯಾ ಉದ್ನೂರ ಮಾತನಾಡಿ, ಪ್ರತಿಯೊಬ್ಬರೂ ಕಲೆ ಆಸ್ವಾದಿಸಬೇಕು. ಕಲಾತ್ಮಕ ಮುತ್ತುಗಳಿಂದ ಸಾಕಷ್ಟು ತೆರನಾದ ವಸ್ತುಗಳನ್ನು ಕಲೆಗೆ ಅಳವಡಿಸಿದ್ದಾರೆ. ಮೈಸೂರು ಭಾಗದಲ್ಲಿ ಮಾತ್ರ ಕಾಣಿಸುತ್ತಿದ್ದ ದಸರಾ ಗೊಂಬೆ ಪ್ರದರ್ಶನ ನಮ್ಮ ಭಾಗದಲ್ಲೂ ನೋಡಿ ಖುಷಿ ತಂದಿತು ಎಂದರು.
ರಾಠಿ ಕಾವಡೆ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ವೀಣಾ ಹಳ್ಳೂರ ಮಾತನಾಡಿ, ಗೊಂಬೆ ಪ್ರದರ್ಶನದಲ್ಲಿ ಒಂದೊಂದು ಗೊಂಬೆಗಳ ಕಥೆ, ಇತಿಹಾಸ ತಿಳಿಸಿಕೊಡುತ್ತವೆ. ದಸರಾ ಗೊಂಬೆ ಪ್ರದರ್ಶನ ಈ ಭಾಗದಲ್ಲಿ ಇನ್ನೂ ಹೆಚ್ಚಾಗಲಿ ಎಂದರು.
ಸುಮಾ ಹೆಗಡೆ, ಶಿಲ್ಪಾ ಶೀಲವಂತ, ಸುಧಾ ಉಟಗಿ, ನಂದಾ ರಾಜನಾಳ, ಅಶೋಕ ಹೆಗಡೆ, ಸುಜಾತಾ ಕರಡಿಗುಡ್ಡ, ಕಾಳಮ್ಮ ಬಡಿಗೇರ, ಗೌರಮ್ಮ ಕಲಬುರ್ಗಿ, ಬಸವರಾಜ ಹೆಗಡೆ, ಮಾಲಾ ರಾಜನಾಳ, ದ್ರಾಕ್ಷಾಯಣಿ ಗೊಬ್ಬಿ, ಸುರೇಶ ರಾಜನಾಳ, ಮಲ್ಲೇಶ ತಿಮ್ಮರಮಟ್ಟಿ, ಎ.ಜಿ. ಕವಡಿಮಟ್ಟಿ, ಬಸವರಾಜ ಯಳಮೇಲಿ, ಶಶಿಕಲಾ ತಿಪ್ಪಾ, ಶಶಿಕಲಾ ಜಗತಾಪ, ಜಗದೀಶ ಹುಬ್ಳಿಕರ ಇತರರಿದ್ದರು.