ದಸರಾ ಗಜಪಡೆ 2ನೇ ತಂಡ ಆ.25ರ ನಂತರ ಆಗಮನ

Mysore Dasara Elephants begin training
Published on

ಮೈಸೂರು: ಗಜಪಡೆಯ 2ನೇ ತಂಡ ಆ.25 ರ ನಂತರ ಆಗಮಿಸುವ ನಿರೀಕ್ಷೆ ಇದೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭು ಗೌಡ ಹೇಳಿದರು.

2ನೇ ತಂಡ ಆಗಮಿಸಿದ ನಂತರ ಆನೆಗಳಿಗೆ ಭಾರ ಹೊರಿಸುವ ತಾಲೀಮು ನಡೆಸಲಾಗುವುದು. ಇದೀಗ ಆನೆಗಳು ಬನ್ನಿಮಂಟಪದವರೆಗೆ ತಾಲೀಮು ನಡೆಸುತ್ತಿದೆ ಎಂದರು.

ಪ್ರಶಾಂತ ಆನೆಯ ಆರೋಗ್ಯ ಸ್ಥಿರ: ಆನೆಗಳಿಗೆ ಇಂದಿನಿಂದ ವಿಶೇಷ ಆಹಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಆನೆಗಳ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗಲಿದೆ. ವಿಶೇಷ ಆಹಾರದಿಂದ ಪ್ರಶಾಂತ ಆನೆಗೆ ಬೇದಿ ಆಗುತ್ತಿದ್ದು, ಇದೀಗ ಚೇತರಿಸಿಕೊಂಡಿದ್ದು, ಮತ್ತೆ ತಾಲೀಮಿನಲ್ಲಿ ಭಾಗಿಯಾಗುತ್ತಾನೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭು ಗೌಡ ಹೇಳಿದರು.

ಆನೆಗಳಿಗೆ ಆಹಾರ ನೀಡಲು ಉಗ್ರಾಣ ಇದ್ದು, ಅದಕ್ಕೆ ಹೊಂದಿಕೊಂಡಂತೆ ಅಡುಗೆ ತಯಾರಿಯ ಟೆಂಟ್ ನಿರ್ಮಿಸಲಾಗಿದೆ. ಆಹಾರದಿಂದ ಆನೆಗಳ ಆರೋಗ್ಯದಲ್ಲಿ ವ್ಯತ್ಯಾಸವಾದರೆ ದಸರಾ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇಲಾಖೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ಇಟ್ಟಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net