

ಮೈಸೂರು: ದಸರಾ ಗಜಪಡೆ ತಾಲೀಮಿಗೂ ಮುನ್ನ ಎಳೆದೊಯ್ಯುತ್ತಿದ್ದ ಮ್ಯಾಗ್ನೆಟ್ ಟ್ರ್ಯಾಲಿಯಲ್ಲಿ ನಿತ್ಯ ಅರ್ಧ ಕೆಜಿ ಕಬ್ಬಿಣದ ಚೂರು ಸಂಗ್ರಹವಾಗುತ್ತು. ಈ ವರೆಗೂ 25 ಕೆಜಿಗೂ ಹೆಚ್ಚು ಕಬ್ಬಿಣ ಮೊನಚಾದ ಚೂರುಗಳು ದೊರೆತಿದೆ.
ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತ್ ಮೈದಾನದವರೆಗೆ ತಾಲೀಮಿನಲ್ಲಿ ಗಜಪಡೆ ತೆರಳುವ ಮುನ್ನ ಅರಣ್ಯ ಇಲಾಖೆಯ ವಾಹನದಲ್ಲಿ ಮ್ಯಾಗ್ನೆಟ್ ಟ್ರ್ಯಾಲಿ ಎಳೆದುಕೊಂಡು ಹೋಗಲಾಗುತ್ತಿತ್ತು.
ಅದರಲ್ಲಿ ದಿನಕ್ಕೆ ಅರ್ಧ ಕೆಜಿಯಷ್ಟು ಕಬ್ಬಿಣದ ಚೂರು, ನಟ್ಟು, ಬೋಲ್ಟ್ ಸೇರಿದಂತೆ ಕಬ್ಬಿಣದ ವಸ್ತುಗಳು ಸಂಗ್ರಹವಾಗಿದೆ. ಈ ಟ್ರಾೃಲಿ ಬಳಕೆ ಆನೆಗಳ ಪಾದ ರಕ್ಷಣೆಗೆ ಸಹಕಾರಿಯಾಗಿದೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ತಿಳಿಸಿದರು.
ಆನೆಗಳ ಪಾದವನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಪ್ರಶಾಂತ ಆನೆಯ ಪಾದದಲ್ಲಿ ಚಿಕ್ಕ ಮೊಳೆ ಚುಚ್ಚಿಕೊಂಡಿರುವುದು ಪತ್ತೆಯಾಗಿತ್ತು. ಅದನ್ನು ಹೊರಗೆ ತೆಗೆಯಲಾಗಿದೆ.
ತಾಲೀಮಿನಲ್ಲಿ ಒಮ್ಮೆ ಭೀಮ ಆನೆಯ ಪಾದಕ್ಕೆ ಚಿಕ್ಕ ಹರಳೊಂದು ಚುಚ್ಚಿಕೊಂಡಿತ್ತು. ಅದನ್ನು ಹೊರ ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.