

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ದಸರಾ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಯುವ ಶಕ್ತಿಯ ಅನಾವರಣವಾಯಿತು.
ಜಿಲ್ಲೆಯ ಎಲ್ಲ ತಾಲೂಕಿನ ಸುಮಾರು 800 ವಿದ್ಯಾರ್ಥಿಗಳು, ಯುವಕರು ಭಾಗವಹಿಸಿ, ತಮ್ಮ ಪ್ರತಿಭೆಯ ಅನಾವರಣಗೊಳಿಸಿದರು.
ಕಬ್ಬಡ್ಡಿ, ವಾಲಿಬಾಲ್, ಎತ್ತರ ಜಿಗಿತ, ಉದ್ದ ಜಿಗಿತ, ರನ್ನಿಂಗ್, ಖೋ ಖೋ, ಟೆನ್ನಿಸ್, ಜೂಡೋ, ಭರ್ಜಿ ಎಸೆತ, ಗುಂಡು ಎಸೆತ, ಹ್ಯಾಂಡ್ ಬಾಲ್ ಸೇರಿದಂತೆ 15ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ನೂರಾರು ಬಾಲಕ, ಬಾಲಕಿಯರು ಭಾಗವಹಿಸಿ ಜೋಷ್ ತೋರಿದರು.
ಕ್ರೀಡಾಪಟುಗಳ ಜೊತೆಗೆ ಬಂದವರು, ಸ್ನೇಹಿತರ ಕ್ರೀಡಾಪಟುಗಳಪರ ಘೋಷಣೆ ಕೂಗಿ, ಅವರಿಗೆ ಸ್ಫೂರ್ತಿ ತುಂಬಿದರು. ವಿಶೇಷವಾಗಿ ತಾಲೂಕಿನ ವಿವಿಧ ಹಳ್ಳಿಗಳಿಂದ ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಜಿಲ್ಲಾಮಟ್ಟದಲ್ಲಿ ಮಿಂಚಿದ್ದು, ಗಮನಾರ್ಹವಾಗಿತ್ತು.