ದಸರಾ ಕುಸ್ತಿ ಅಖಾಡದಲ್ಲಿ 250 ಜೋಡಿ ಸಜ್ಜು

mysore
Published on

ಮೈಸೂರು: ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿರುವ ದಸರಾ ಕುಸ್ತಿ ಅಖಾಡದಲ್ಲಿ ಈ ಸಲ 250 ಜೋಡಿಗಳು ಸೆಣಸಾಟಕ್ಕೆ ಸಜ್ಜಾಗಿವೆ.

ನಗರದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಕುಸ್ತಿ ಪಂದ್ಯಾವಳಿಯ ಜೋಡಿ ಕಟ್ಟುವ ಕಾರ್ಯ ನಡೆಯಿತು. ಮಹಿಳೆಯರು, ಪುರುಷರು, ಯುವಕರು, ಚಿಣ್ಣರಿಗೆ ಪ್ರತ್ಯೇಕವಾಗಿ ಜೋಡಿ ಕಟ್ಟಲಾಯಿತು.

ಮೈಸೂರು ಸೇರಿದಂತೆ ವಿವಿಧ ಊರಿನಿಂದ 400 ಪೈಲ್ವಾನರು ಬಂದಿದ್ದರು. ಅರ್ಜಿ ಹಾಗೂ ಪೂರಕ ದಾಖಲೆ ಸಲ್ಲಿಸಿದರು. ಪರಿಶೀಲನೆ ಬಳಿಕ ವಯಸ್ಸು, ತೂಕ, ದೇಹದಾರ್ಢ್ಯತೆ ಹಾಗೂ ವೈಯಕ್ತಿಕ ವಾಹಿತಿಗಳ ಆಧಾರದ ಮೇಲೆ 250 ಜೋಡಿಗಳನ್ನು ಕಟ್ಟಲಾಯಿತು. ಇದರಲ್ಲಿ 20 ಮಹಿಳಾ ಕುಸ್ತಿ ಪಟುಗಳು ಮತ್ತು 25 ಪುಟಾಣಿ ಪೈಲ್ವಾನರ ಜೋಡಿಗಳಿದ್ದವು.

ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಪುರುಷರು ಮತ್ತು ಮಹಿಳಾ ಕುಸ್ತಿಪಟುಗಳಿಗೆ ಮತ್ತು 15 ಹಾಗೂ 17 ವರ್ಷದೊಳಗಿನ ಕುಸ್ತಿಪಟುಗಳಿಗೆ ಸೆ.23ರಂದು ಬೆಳಗ್ಗೆ 8ಕ್ಕೆ ದೇಹದ ತೂಕ ಪರೀಕ್ಷೆ ನಡೆಯಲಿದೆ.

ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾಗುವ ಕುಸ್ತಿಪಟುಗಳಿಗೆ ದಸರಾ ಕುಸ್ತಿ ಉಪ ಸಮಿತಿ ವತಿಯಿಂದ ಸಾಹುಕಾರ್ ಚೆನ್ನಯ್ಯ ಕಪ್, ಮೈಸೂರು ಮಹಾರಾಜ ಒಡೆಯರ್ ಕಪ್, ಮೈಸೂರು ಮೇಯರ್ ಕಪ್ ಮತ್ತು ಕಿತ್ತೂರು ರಾಣಿ ಚನ್ನಮ್ಮ ಕಪ್ ದೊರೆಯಲಿದೆ.

ನಾಡ ಕುಸ್ತಿ, ಪಾಯಿಂಟ್ ಕುಸ್ತಿ, ಪಂಜಕುಸ್ತಿ ಪೋಸ್ಟರ್‌ಅನ್ನು ಬಿಡುಗಡೆಗೊಳಿಸಲಾಯಿತು. ದಸರಾ ಕುಸ್ತಿ ಉಪ ಸಮಿತಿ ಉಪ ವಿಶೇಷಾಧಿಕಾರಿ ಎಲ್.ನಾಗೇಶ್, ಕಾರ್ಯಾಧ್ಯಕ್ಷ ಎಚ್.ಸಿ.ನಾಗೇಂದ್ರಪ್ಪ, ಕಾಂರ್ುದರ್ಶಿ ಜಿ.ಎಸ್.ರಘು, ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದ ಅಧ್ಯಕ್ಷ ನವೀನ್ ಚಂದ್ರ, ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಕೆ. ವಿಶ್ವನಾಥ್, ಖಜಾಂಚಿ ದಂಾನಂದ ಕದಂಬ, ಸಂಯೋಜಕ ಎಂ.ರಾಜು, ಮೊಹಮ್ಮದ್ ನಾಸಿರ್, ಪೈ. ಚಂದ್ರಶೇಖರ್, ಪೈ. ಶ್ರೀನಿವಾಸ್‌ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net