ದಸರಾ ಉದ್ಘಾಟನೆಯಲ್ಲಿ ಮೇಯರ್‌ಗೆ ಅಪಮಾನ: ಮಾಜಿ ಮೇಯರ್ ಬೇಸರ

Published on

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟನೆಯಲ್ಲಿ ನಗರದ ಪ್ರಥಮ ಪ್ರಜೆಗೆ ವೇದಿಕೆಯಲ್ಲಿ ಕೂರಲು ಅವಕಾಶ ನೀಡದೆ ಅಪಮಾನ ಮಾಡಲಾಗಿದೆ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಅಸಮಧಾನ ವ್ಯಕ್ತಪಡಿಸಿದರು.
ರಾಷ್ಟ್ರಪತಿ ಸೇರಿದಂತೆ ಪ್ರಮುಖ ಗಣ್ಯರು ಆಗಮಿಸಿದಾಗ ಅವರನ್ನು ಸ್ವಾಗತಿಸುವವರು ಮೇಯರ್. ಬೇರೆ ದೇಶಗಳಲ್ಲಿ ಮೇಯರ್ ಆ ನಗರ, ಪಟ್ಟಣದ ಸುಪ್ರೀಂ ಅಗಿರುತ್ತಾರೆ. ಆದರೆ ನಮ್ಮಲ್ಲಿ ವೇದಿಕೆಯನ್ನೂ ನೀಡಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಅಥವಾ ಪ್ರಧಾನಿ ಕಚೇರಿಯಿಂದ ಇಂತಹ ಪ್ರಮಾದ ಆಗಿದ್ದರೂ ಈ ಬಗ್ಗೆ ವಿಶೇಷ ಕೌನ್ಸಿಲ್ ಕರೆದು ಖಂಡನಾ ನಿರ್ಣಯ ಕೈಗೊಳ್ಳಬೇಕು. ಪಕ್ಷಕ್ಕಿಂತ ಮೇಯರ್ ಸ್ಥಾನದ ಘನತೆಯನ್ನು ಉಳಿಸಬೇಕು ಎಂದು ಮೇಯರ್ ಶಿವಕುಮಾರ್ ಅವರನ್ನು ಒತ್ತಾಯಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net