ದಶಸೂತ್ರ ಪಾಲನೆಯಿಂದ ನೆಮ್ಮದಿ

2Manju3
Published on

ಬೆಳಗಾವಿ: ಅಹಿಂಸೆ, ಸತ್ಯ, ಆಸ್ತೇಯ ಬ್ರಹ್ಮಚರ್ಯ, ದಯಾ, ಕ್ಷಮಾದಾನ, ಪೂಜಾ, ಜಪ, ಧ್ಯಾನ ಎಂಬ ದಶಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಬಂಗಾರವಾಗುತ್ತದೆ ಎಂದು ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಡಾ. ತ್ರೀನೇತ್ರ ಮಹಾಂತೇಶ ಶಿವಯೋಗಿ ಸ್ವಾಮೀಜಿ ಹೇಳಿದರು.

ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಗುರುವಾರ ಆಯೋಜಿಸಿದ್ದ ರೇಣುಕಾಚಾರ್ಯರ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಜಗದ್ಗುರು ರೇಣುಕರ ತತ್ವ ವಿಶ್ವಮಾನ್ಯವಾಗಿದ್ದು, ಸಿದ್ಧಾಂತ ಶಿಖಾಮಣಿಯಲ್ಲಿ ದಶ ಧರ್ಮ ಸೂತ್ರಗಳ ಬಗ್ಗೆ ಹೇಳಿದ್ದಾರೆ. ರೇಣುಕರು ಬೋಧಿಸಿದ ಸಿದ್ಧಾಂತ ಶಿಖಾಮಣಿ 18 ಭಾಷೆಯಲ್ಲಿ ಲಭ್ಯವಿದೆ ಎಂದರು.

ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕರು ಹೇಳಿರುವ ವಿಚಾರಗಳು ಎಲ್ಲರಿಗೂ ಅನ್ವಯವಾಗಿರುವಂತಹದ್ದು. ಇವತ್ತು ನಾವೆಲ್ಲರೂ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುವುದು ಅವಶ್ಯ ಎಂದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದು ಅಭಿಮಾನದ ಸಂಗತಿ. ಎಲ್ಲೆಡೆ ಅವರ ವಿಚಾರಗಳು ಹೆಚ್ಚು ಜನಜನಿತವಾಗಲಿ ಎಂದರು. ಯಡಿಯೂರಿನ ಸಿದ್ಧಲಿಂಗೇಶ್ವರ ಪಾಠ ಶಾಲೆಯ ವಟುವೃಂದದವರು ವಿಶೇಷ ಪೂಜೆ ಸಲ್ಲಿಸಿದರು. ವಿರೂಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರಯ್ಯ ಸವಡಿಸಾಲಿಮಠ, ಕಲ್ಲಪ್ಪ ಬೋರಣ್ಣವರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net