ದೇಶದ ಪ್ರಗತಿಗೆ ಪೂರಕ ಕೆಲಸ ಅಗತ್ಯ

HLK MALLADIHALLI
Published on

ಹೊಳಲ್ಕೆರೆ: ದೇಶದ ಪ್ರಗತಿಗೆ ಸಕಾರಾತ್ಮಕತೆಯಿಂದ ಕೆಲಸ ನಿರ್ವಹಿಸಿದಾಗ ಮಾತ್ರದ ದೇಶದ ಅಭಿವೃದ್ಧಿ ಸಾಧ್ಯ ಎಂದು ಅನಾಥಸೇವಾಶ್ರಮದ ಕಾರ್ಯದರ್ಶಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅಭಿಪ್ರಾಯಪಟ್ಟರು.

ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಆವರಣದಲ್ಲಿ ಮಾತನಾಡಿ, ಯಾವುದೇ ದೇಶ ಅಭಿವೃದ್ಧಿ ಕಾಣಬೇಕಾದರೆ ಅಲ್ಲಿಯ ನಾಗರಿಕರು ದೇಶಪ್ರೇಮಿಗಳು ಆಗಿರಬೇಕು ಎಂದರು.

ಅನಾಥಸೇವಾಶ್ರಮದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಪಥಸಂಚಲನಾ ಕಾರ್ಯಕ್ರಮ ನಡೆಯಿತು. ಜಿ.ವಿ.ಶಿವಕುಮಾರ್, ಜಿ.ಗುರುಪಾದಪ್ಪ, ಡಿ.ಕೆ.ಚಂದ್ರಪ್ಪ ಇತರರು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net