ದೇವಸ್ಥಾನ ಲೋಕಾರ್ಪಣೆ

w
Published on

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯ ಬಳಿಯ ಸಾಧುನವರ ಎಸ್ಟೇಟ್‌ನ ಶ್ರೀ ಸಾಯಿ ಗಾರ್ಡನ್‌ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸುಬ್ರಮಣ್ಣೇಶ್ವರ ಸ್ವಾಮೀ ದೇವಸ್ಥಾನ ಲೋಕಾರ್ಪಣೆ ಮತ್ತು ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಆ. 31ರಿಂದ ಸೆ. 6ರವರೆಗೆ ಏರ್ಪಡಿಸಲಾಗಿದೆ.
ಆ. 31ರಂದು ಬೆಳಗ್ಗೆ 9.30ಕ್ಕೆ ಷಟಸ್ಥಲ ಧ್ವಜಾರೋಹಣ, ಸಂಜೆ 4 ಗಂಟೆಗೆ ಶ್ರೀ ಬಸವಣ್ಣ ದೇವಸ್ಥಾನದಿಂದ ಪೂರ್ಣ ಕುಂಭ ಹಾಗೂ ಸಕಲ ವಾದ್ಯಮೇಳದೊಂದಿಗೆ ಸುಬ್ರಮಣ್ಯ, ಶಿವ, ನಂದಿ, ಕರೆಮ್ಮದೇವಿ ಮೂರ್ತಿಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುವುದು.
ಸೆ. 5ರಂದು ಸಂಜೆ 7ಗಂಟೆಗೆ ಗಣಹೋಮ, ಪೂಜೆ, ಸೆ. 6ರಂದು ಬೆಳಗ್ಗೆ 4 ಗಂಟೆಗೆ ಹೋಮ, ಹವನ ವಿವಿಧ ಪೂಜೆ, 9.30ಕ್ಕೆ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಈ ಸಮಾರಂಭ ನಿಮಿತ್ತ ಆ. 31ರಿಂದ ಸೆ. 4ರ ವರೆಗೆ ತಾರಿಹಾಳದ ಅಡವಿಸಿದ್ದೇಶ್ವರ ಮಠದ ಅಡವೀಶ ದೇವರಿಂದ ಪ್ರವಚನ ಜರುಗಲಿದೆ. ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಸ್ವಾಮೀಜಿಗಳು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಸಾಧುನವರ ಎಸ್ಟೇಟ್ ನಿವಾಸಿಗಳ ಸಂಘದ ಅಧ್ಯಕ್ಷ ನಿಜನಗೌಡ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net