ನ್ಯಾ.ಸದಾಶಿವ ಆಯೋಗದ ವರದಿ ಕೈಬಿಡಿ

06-DVD-1 (Ramesh)
Published on

ದೇವದುರ್ಗ: ಪರಿಶಿಷ್ಟ ಸಮುದಾಯದ 101 ಜಾತಿಗಳಿಗೆ ಮಾರಕವಾಗಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬಾರದು ಎಂದು ಒತ್ತಾಯಿಸಿ ನ.10ರಂದು ಬೆಂಗಳೂರಿನಲ್ಲಿ ಗೋರ ಸೇನಾ ರಾಷ್ಟ್ರೀಯ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಅಧ್ಯಕ್ಷ ರಮೇಶ ಹೇಮಣ್ಣ ರಾಠೋಡ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಜಾರಿಗೆ ಕೆಲ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ. ಆದರೆ, ವರದಿ ಬಹಿರಂಗವಾಗಿಲ್ಲ. ವರದಿ ಬಗ್ಗೆ ಸಾರ್ವಜನಿಕ ಚರ್ಚೆಯೂ ಆಗಿಲ್ಲ. ಇದರಿಂದಾಗಿ ಕೆಲ ಜಾತಿಗಳ ಹಿತಕ್ಕಾಗಿ ವರದಿಯ ಶಿಫಾರಸುಗಳನ್ನು ಜಾರಿ ಮಾಡುವುದು ಸರಿಯಲ್ಲ ಎಂದು ದೂರಿದರು.

ಸರ್ಕಾರ ವರದಿಯ ಶಿಫಾರಸುಗಳ ಜಾರಿಗೆ ಮುಂದಾದರೆ ಎಲ್ಲ ತಾಂಡಾ, ದೊಡ್ಡಿ, ಹಟ್ಟಿಯಲ್ಲಿ ಮುಂಬರುವ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ರಮೇಶ ಎಚ್ಚರಿಸಿದರು. ಪದಾಧಿಕಾರಿಗಳಾದ ಬೂದೆಪ್ಪ ರಾಠೋಡ್, ಬಾಸುನಾಯಕ, ನರೇಶ ಜಾದವ್, ಕುಮಾರ ರಾಠೋಡ್, ಪೋಮಣ್ಣ ಪವರ್, ಗೋವಿಂದ ರಾಠೋಡ್, ಪಾಪಣ್ಣ ಜಾದವ್, ಉಮಣ್ಣ ರಾಠೋಡ್, ಹೇಮರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net