ದಲಿತರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ

02 HANUR 3
ರಾಮಾಪುರದಲ್ಲಿ ಕೋರೆಂಗಾವ್ ವಿಜಯೋತ್ಸವದ ಹಿನ್ನಲೆ ಆಯೋಜಿಸಿದ್ಧ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸುಗತಪಾಲ ಬಂತೇಜಿ ಉದ್ಘಾಟಿಸಿದರು. ಮಾವಳ್ಳಿ ಶಿವಶಂಕರ್, ಓಲೆ ಮಹದೇವು, ಸಿದ್ದರಾಜು, ಮಹದೇವಕುಮಾರ್ ಇತರರು ಇದ್ದರು.
Published on

ಹನೂರು: ದಲಿತರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಸಮಾಜದಲ್ಲಿ ಜಾಗೃತರಾಗಿ ಸಂಘಟಿತರಾಗಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಿವಶಂಕರ್ ಸಲಹೆ ನೀಡಿದರು.

ತಾಲೂಕಿನ ರಾಮಾಪುರ ಗ್ರಾಮದ ಜೆಎಸ್‌ಎಸ್ ಸಭಾ ಭವನದಲ್ಲಿ ಭಾನುವಾರ ಕೊರೆಂಗಾವ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದ ಬದಲಾವಣೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟ ಮಹಾನ್ ನಾಯಕ. ದೇಶದಲ್ಲಿ ಜಾತಿ ಅಸಮಾನತೆ ಇಂದಿಗೂ ಇದ್ದು, ದಲಿತರ ಮೇಲಿನ ಶೋಷಣೆ ಇಂದಿಗೂ ತಪ್ಪಿಲ್ಲ. ಆದ್ದರಿಂದ ಅಂಬೇಡ್ಕರ್ ಅವರ ಹೋರಾಟದ ಹಾದಿಯನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಜತೆಗೆ ಉನ್ನತ ಶಿಕ್ಷಣವನ್ನು ಪಡೆಯಬೇಕು. ಜಾತಿ, ಅಸ್ಪಶ್ಯತೆಯ ವಿರುದ್ಧದ ಕೋರೆಂಗಾವ್ ವಿಜಯೋತ್ಸವ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ಎಂದು ತಿಳಿಸಿದರು.

ಇದೇ ವೇಳೆ ವಿಚಾರವಾದಿ ಮಣಗಳ್ಳಿ ಮಹದೇವಕುಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಬಸವರಾಜು ಮಾತನಾಡಿದರು. ಸುಗತಪಾಲ ಬಂತೇಜಿ, ದಸಂಸ ಮೈಸೂರು ವಿಭಾಗೀಯ ಸಂಚಾಲಕ ಸಿದ್ದರಾಜು, ಗುತ್ತಿಗೆದಾರರಾದ ಓಲೆ ಮಹದೇವು, ಪುಟ್ಟಸ್ವಾಮಿ, ಗ್ರಾಪಂ ಉಪಾಧ್ಯಕ್ಷ ರಾಮಲಿಂಗಂ, ಮುಖಂಡರಾದ ಮಣಿ, ಮುನೇಶ್, ಬಾಲಯ್ಯ, ಗಿರೀಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net