

ಚಿತ್ರದುರ್ಗ: ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಎನ್.ಮೂರ್ತಿ ಬಣ) ಕಾರ್ಯಕರ್ತರು ಶುಕ್ರವಾರ ಅವರ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಗೌರವ ಸಲ್ಲಿಸಿದರು.
ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ಎಚ್.ಮಂಜುನಾಥ್ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ದಲಿತರು, ಶೋಷಿತರು ಸ್ವಾವಲಂಬಿ ಆಗಬಹುದೆಂಬ ಕನಸು ಕಂಡಿದ್ದ ಅಂಬೇಡ್ಕರ್ ಆಶಯ ಈಡೇರಲು ದಲಿತರೆಲ್ಲರೂ ಮೊದಲು ವಿದ್ಯಾವಂತರಾಗಬೇಕು ಎಂದು ಸಲಹೆ ನೀಡಿದರು.
ಮುಖಂಡರಾದ ಡಿ.ಶಿವಣ್ಣ, ರಂಗಸ್ವಾಮಿ, ಟಿ.ಎಚ್.ಶಿವಣ್ಣ, ನೇಹ ಮಲ್ಲೇಶ್, ಡಿ.ಜಯಪ್ಪ, ಎಚ್.ಭೀಮಪ್ಪ, ಚನ್ನಿಗರಾಮಯ್ಯ, ಬಿ.ಟಿ.ಚಿದಾನಂದಮೂರ್ತಿ, ಸಂಪತ್‌ಕುಮಾರ್, ಹರೀಶ್, ಹನುಮಂತಪ್ಪ, ಬೆನಕರಾಜು, ಕೃಷ್ಣಪ್ಪ, ಪರಮೇಶ್ವರಪ್ಪ, ವೆಂಕಟೇಶ್ ಇತರರಿದ್ದರು.