

ಹಾಸನ : ದೇಶದಲ್ಲಿ ದಲಿತರು ಹಾಗೂ ಮುಸ್ಲಿಮರು ಹೆಚ್ಚನ ಸಂಖ್ಯೆಯಲ್ಲಿದ್ದು, ನಮ್ಮ ಒಗ್ಗಟ್ಟು ಮತ್ತು ಶಕ್ತಿಯಿಂದ ನಮ್ಮವರು ದೇಶದ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಡಾ. ರಾಜರತ್ನಂ ಅಂಬೇಡ್ಕರ್ ಹೇಳಿದರು.
ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಗುರುವಾರ ಹಾಸನಕ್ಕೆ ತೆರಳುವ ಮಾರ್ಗ ಮಧ್ಯೆ ಬೇಲೂರು ಪಟ್ಟಣದ ನೆಹರುನಗರದಲ್ಲಿ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ದಲಿತರು ಹಾಗೂ ಮುಸ್ಲಿಮರಿಗೆ ರಾಜಕೀಯ ಶಕ್ತಿ ತುಂಬುವಲ್ಲಿ ಅಂಬೇಡ್ಕರ್ ಅವರ ಪಾತ್ರ ದೊಡ್ಡದು. ಆದರೆ ನಾವು ಸಂಘಟನೆಯಲ್ಲಿ ತೀರಾ ಹಿಂದುಳಿದಿದ್ದೇವೆ. ಇದರಿಂದಲೇ ನಮ್ಮವರು ಪ್ರಧಾನಿ ಪಟ್ಟ ಏರಲು ಸಾಧ್ಯವಾಗುತ್ತಿಲ್ಲ. ನಾವು ಸಂಘಟಿತರಾದರೆ ನಮ್ಮವರು ಪ್ರಧಾನಿಯಾಗಬಹುದು ಎಂದರು.
ಮುಖಂಡರಾದ ರವಿಕಿರಣ್, ಗೋವಿನಹಳ್ಳಿ ರವಿ, ಲಕ್ಷ್ಮಣ್, ಯೋಗೇಶ್, ರೂಪೇಶ್, ತೀರ್ಥಕುಮಾರ್, ಮಂಜುನಾಥ್, ಇಸ್ಮಾಯಿಲ್, ಶ್ರೀನಿವಾಸ್ ಇತರರು ಇದ್ದರು.