ದಲಿತರ ಬಡಾವಣೆಗೆ ಜಲ ದಿಗ್ಭಂಧನ

1710 Chincholi 02
Published on


ಚಿಂಚೋಳಿ: ಭೋಗಾವತಿ (ಮುಲ್ಲಾಮಾರಿ) ನದಿ ಪಾತ್ರದ ಜನತೆಯ ಗೋಳು ಕೇಳತೀರದಾಗಿದೆ. ನಾಗರಾಳ ಜಲಾಶಯದಿಂದ ಹೆಚ್ಚಿನ ನೀರನ್ನು ಬಿಟ್ಟಿರುವುದರಿಂದ ಗಾರಂಪಳ್ಳಿ ಗ್ರಾಮದ ಹೊರ ವಲಯದಲ್ಲಿರುವ ದಲಿತರ ಬಡಾವಣೆಯಲ್ಲಿನ 80 ಮನೆಗಳಿಗೆ ನೀರು ಹೊಕ್ಕಿದ್ದು, 350ಕ್ಕೂ ಹೆಚ್ಚು ಜನರ ಅತಂತ್ರರಾಗಿದ್ದಾರೆ.ಸುಮಾರು 350 ಕ್ಕೂ ಅಧಿಕ ಜನಸಂಖ್ಯೆ ವಾಸಿಸುವ ಬಡಾವಣೆಯ ಸ್ಥಿತಿ ಹೇಳ ತೀರದಾಗಿದೆ. ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದು, ಜನರು ಎಲ್ಲಿಗೂ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ದಿನಬಳಕೆ ವಸ್ತುಗಳಿಗಾಗಿ ಪರದಾಡುವಂತಾಗಿದೆ. ಬಡಾವಣೆಯಲ್ಲಿ ಗರ್ಭಿಣಿಯರು ಹಾಗೂ ವೃದ್ಧರಿದ್ದು ಅವರ ಸ್ಥಿತಿ ಹೇಳತೀರದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net