

ಕಲಬುರಗಿ: ರಾಜ್ಯ ಸರ್ಕಾರವು ದಲಿತರಿಗಾಗಿ ಮೀಸಲಾಗಿರುವ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದನ್ನು ದಲಿತ ಸಂಘರ್ಷ ಸಮಿತಿ ಜಿ¯್ಲÁಧ್ಯP್ಷÀ ವಿನೋದಕುಮಾರ ಕಾಂಬಳೆ ಖಂಡಿಸಿದರು. ಅನುಸೂಚಿತ ಜಾತಿ ಮತ್ತು ಜನಾಂಗದ ಬಹುತೇಕರು ಸ್ವಂತ ಸೂರು ಹೊಂದಿಲ್ಲ. ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗ್ಯಾರಂಟಿಗೆ ಎಸ್‌ಸಿಪಿ, ಟಿಎಸ್‌ಪಿ ಹಣ ಬಳಕೆ ಕೈಬಿಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ವಿದೇಶಿ ವ್ಯಾಸಂಗಕ್ಕೆ ಹೋಗುವರಿಗೆ ಶಿಷ್ಯ ವೇತನ ಮುಂದುವರಿಸಬೇಕು, ಮೆರಿಟ್ ಆಧಾರದ ಶಿಷ್ಯವೇತನಕ್ಕೆ ಶೇ.೭೯ಕ್ಕಿಂತ ಅಧಿಕ ಅಂಕ ಕೈಬಿಟ್ಟು, ಮೊದಲಿನಂದ ಶೇ.೬೦ಕ್ಕಿಂತ ಅಧಿಕ ಅಂಕ ಮೆಟ್ರಿಕ್ ಪಾಸಾದವರಿಗೂ ನೀಡಬೇಕು, ಕಾಯ್ದೆಯಲ್ಲಿನ ೭ ಸಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಸತೀಶ ಸಾಗನೂರ, ಹಣಮಂತ ತಳಕೇರಿ, ಅನಿಲಕುಮಾರ ವಳಕೇರಿ, ಮೋಹನ ಇತರರಿದ್ದರು.