

ಕಲಬುರಗಿ: ದಲಿತ ಸಮಾವೇಶಕ್ಕೆ ಯಾರದ್ದೆ ಅಪಸ್ವರ ಇಲ್ಲ. ಪಕ್ಷದ ವೇದಿಕೆಯಲ್ಲಿ ಮಾತನಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಮಾಡಬೇಕು ಎಂದು ಹೈಕಮಾಂಡ್ ಹೇಳಿದೆ. ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬುದಷ್ಟೇ ಉz್ದೆÃಶ ಎಂದು ಸಮಾಜ ಕಲ್ಯಾಣ ಇಲಾಖೆ ಎಚ್.ಸಿ.ಮಹಾದೇವಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ವಿಚಾರ ಸದ್ಯಕ್ಕೆ ಇಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮುಖ್ಯಮಂತ್ರಿ ಸ್ಥಾನ ಇರುವುದೇ ದಾಖಲೆ ಮುರಿಯಲು. ಅವಕಾಶ ಸಿಕ್ಕಾಗ ಅಭಿವೃದ್ಧಿ ಮಾಡಬೇಕು ಎಂದು ದೇವರಾಜ ಅರಸ್ ಅವಧಿಗಿಂತ ಹೆಚ್ಚಿನ ಅವಧಿ ಸಿಎಂ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಎಸ್ಸಿಪಿ, ಟಿಎಸ್‌ಪಿ ಹಣದ ಕುರಿತು ದಲಿತ ಸಂಘಟನೆಗಳನ್ನು ಕರೆದು ಸಭೆ ಕರೆದು, ಚರ್ಚೆ ನಡೆಸಲಾಗಿದೆ. ಬಜೆಟ್‌ಗೆ ಹಲವು ಸಲಹೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗೆ ಎಸ್ಸಿಪಿ, ಟಿಎಸ್‌ಪಿ ಹಣ ಸಾಮಾನ್ಯವಾಗಿ ಬಳಸುವುದಿಲ್ಲ. ಆ ಯೋಜನೆಯಡಿ ಬರುವ ಎಸ್ಸಿ, ಎಸ್ಟಿ ಜನರಿಗೆ ಹಣ ಬಳಸಲಾಗುತ್ತದೆ. ಎಲ್ಲರಿಗೂ ಬಳಸಲು ಆಗಲ್ಲ. ಒಂದೇ ಯೋಜನೆಗೆ ಇಡೀ ಹಣ ಬಳಸಲು ಆಗಲ್ಲ ಎಂದರು.
ಬೆಳಗಾವಿಯಲ್ಲಿ ಕಂಡೆಕ್ಟರ್ ಮೇಲೆ ಹಲ್ಲೆ ಪ್ರಕರಣ ದುರಾದೃಷ್ಟಕರ. ಬೆಳಗಾವಿ ಮಹಾರಾಷ್ಟç ಗಡಿ ವಿಚಾರ ಸಾಕಷ್ಟು ಚರ್ಚೆಯಾಗಿ, ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಅದನ್ನು ಮೀರಿ ಕ್ಯಾತೆ ತೆಗೆಯುವವರಿಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್‌ಗೆ ಅವಕಾಶ ಕಾನೂನು ಚೌಕಟ್ಟಿನಲ್ಲಿ ಏನಿದೆ ಎಂಬುದು ಪರಾಮರ್ಶೆ ಮಾಡಿ, ತೀರ್ಮಾನಿಸಲಾಗುತ್ತದೆ. ತೆಲಂಗಾಣದ ಮಾದರಿ ರಂಜಾನ್ ವೇಳೆ ಸರ್ಕಾರಿ ಅವಧಿ ಕಡಿಮೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದರು.