

ದಲಿತ ಸಂಘಟನೆಗಳಿಂದ ಪ್ರತಿಭಟನೆ
ವಿಜಯವಾಣಿ ಸುದ್ದಿ ಸಂಕೇಶ್ವರ
ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಆಗಮಿಸುವ ದಲಿತ ಸಮುದಾಯ ಜನರೊಂದಿಗೆ ಸರಿಯಾಗಿ ಸ್ಪಂದಿಸದ ಸಿಪಿಐ ಶಿವಶರಣ ಅವಜಿ ಠಾಣೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ದಲಿತ ಪರ ಸಂಘಟನೆಗಳು ಮಂಗಳವಾರ ಪಟ್ಟಣದ ಪುರಸಭೆಯ ಡಾ.ಬಿ.ಆರ್ ಅಂಬೇಡ್ಕರ ಉದ್ಯಾನವನದಿಂದ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಪ್ರತಿಭಟನೆ ನಡೆಸಿ ಹೆಚ್ಚುವರಿ ಎಸ್.ಪಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಐಜಿ ಅವರಿಗೆ ಮನವಿ ಸಲ್ಲಿಸಿದರು.
ಠಾಣೆಗೆ ಹೊದರೆ ದಲಿತರಿಗೆ ಯಾವುದೇ ರೀತಿ ಸರಿಯಾಗಿ ಸ್ಪಂದಿಸುವುದಿಲ್ಲ, ಸಮಸ್ಯೆ ಹೇಳಿಕೊಂಡು ಹೋದವರ ಮೇಲೆಯೇ ಅನುಚಿತವಾಗಿ ವರ್ತಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಿಪಿಐ ಶಿವಶರಣರ ಅವಡೆ ಅವರು ಸಂಪೂರ್ಣ ಭಿ 'ಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಬಿ.ಆರ್.ಅಂಬೇಡ್ಕರ್ ಜನ ಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ದೀಲಿಪ ಹೊಸಮನಿ ಆರೋಪಿಸಿದರು.
ನ್ಯಾಯಕ್ಕಾಗಿ ಹೋದ ದಲಿತರ ಮೇಲೆಯೇ ಸುಳ್ಳು ಪ್ರಕರಣ ದಾಖಲು ಮಾಡುತ್ತಿದ್ದು, ಪ್ರಕರಣ ಇತ್ಯರ್ಥಕ್ಕೆ ಒಂದು ಲಕ್ಷ ರೂ.ಲಂಚ ತಗೆದುಕೊಳ್ಳುತ್ತಿದ್ದು, ಇವರ ಮೇಲೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮುಖಂಡ ಮಲ್ಲಿಕಾರ್ಜುನ ಕಾಶಿಂಗೆ ರವಿ.ಕಾಂಬಳೆ, ಪುಂಜು ಮರಡಿ,ಕೆ.ವೆಂಕಟೇಶ, ರಾಜು ಮುತ್ತಾ,ರಾವಾಹೇಬ್ ಪಾಂಡ್ರೆ, ಲಕ್ಷ್ಮಣ ಹೂಲಿ, ರಾಜು ಸಾನೆ, ಅನಿಲ ಖಾತೆದಾರ, ಆಕಾಶ ನಡುವುಗಿ ಇತರರಿದ್ದರು.