ದಲಿತ ವಿದ್ಯಾರ್ಥಿ ಮೇಲೆ ಹಲ್ಲೆಗೆ ಖಂಡನೆ

22Jaggu3
ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಮಹೇಶ ಶೀಗಿಹಳ್ಳಿ, ರಾಮ ಪೂಜಾರಿ, ಶಿವಾ ನಾಯಕ, ವಿಜಯ ಬೇರೆಡ, ಸಚಿನ್ ಕೋಲ್ಕಾರ, ಅಖಿಲ್ ಸತ್ಯಣ್ಣವರ ಇತರರಿದ್ದರು.
Published on

ಬೆಳಗಾವಿ: ರಾಜಸ್ಥಾನದ ಜಲೋರ ಜಿಲ್ಲೆಯ ಸುರಾಣ ಹಳ್ಳಿಯಲ್ಲಿ ನೀರಿನ ಮಡಿಕೆ ಮುಟ್ಟಿದ ದಲಿತ ವಿದ್ಯಾರ್ಥಿಯನ್ನು ಶಿಕ್ಷಕನೇ ಥಳಿಸಿ ಕೊಂದಿರುವುದು ನಾಚಿಕೆಗೇಡಿನ ಸಂಗತಿ. ಘಟನೆ ಹೊಣೆ ಹೊತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ರಾಜೀನಾಮೆ ಪಡೆಯಬೇಕು. ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಜುಲೈ 20ರಂದು ದಲಿತ ವಿದ್ಯಾರ್ಥಿಗೆ ಶಿಕ್ಷಕ ಥಳಿಸಿದ್ದಾರೆ.

ಆ.13ರಂದು ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ದಲಿತ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮುಖ್ಯಮಂತ್ರಿ ಅವರಿಂದ ರಾಜೀನಾಮೆ ಪಡೆದು, ಅಲ್ಲಿಯ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು. ಶಿಕ್ಷಕ ಚೈಲಸಿಂಗ್ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.ಮಹೇಶ ಶೀಗಿಹಳ್ಳಿ, ರಾಮ ಪೂಜಾರಿ, ಶಿವಾ ನಾಯಕ, ವಿಜಯ ಬೇರಡ, ಸಚಿನ ಕೋಲ್ಕಾರ, ಅಖಿಲ್ ಸತ್ಯಣ್ಣವರ, ರಂಜಿತ ನಂದಿ, ರಾಜು ಆರ್.ಕೆ., ಮಲ್ಲಿಕಾರ್ಜುನ ಕಾಂಬಳೆ, ಕರೆಪ್ಪ ಗಸ್ತಿ, ಮಹೇಶ ಪವಾರ, ಸಾಗರ ತಳವಾರ, ಬೀಮಶಿ ಬಡ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net