ದಲಿತ ನೌಕರರ ಕ್ಷೇಮಾಭಿವೃದ್ಧಿಗೆ ಸಂಘ ರಚನೆ

6skp2
ಚಂದ್ರಾನಾಯ್ಕ
Published on

ಶಿಕಾರಿಪುರ: ಎಸ್‌ಸಿ, ಎಸ್‌ಟಿ ನೌಕರರ ಸಂಘದ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಬೇರೆ ಬೇರೆ ಉತ್ಸವಗಳು ನಡೆಸುವಂತೆ ದಲಿತ ನೌಕರರ ಉತ್ಸವ ಆಯೋಜಿಸಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರಾನಾಯ್ಕಾ ಹೇಳಿದರು.

ದಲಿತ ನೌಕರರ ಕ್ಷೇಮಾಭಿವೃದ್ಧಿ ಬಗ್ಗೆ ಗಮನಹರಿಸುವುದು. ಆರ್ಥಿಕವಾಗಿ ಹಿಂದುಳಿದ ದಲಿತರ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡುವುದು. ಎಸ್‌ಸಿ, ಎಸ್‌ಟಿ ನೌಕರರ ಮಕ್ಕಳ ಪ್ರತಿಭೆ ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಸೇರಿದಂತೆ ವೈವಿಧ್ಯ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿಗೆ ಹೊಸದಾಗಿ ಬಂದಿರುವ ಎಸ್‌ಸಿ, ಎಸ್‌ಟಿ ನೌಕರರನ್ನು ಗುರುತಿಸಿ ಅವರ ಸದಸ್ಯತ್ವ ನೋಂದಣಿ ಮಾಡಿಸಿ ನೌಕರರ ಹಿತರಕ್ಷಣೆ ಮಾಡಲಾಗುವುದು. ದಲಿತ ಸಮುದಾಯಗಳ ಹಟ್ಟಿ ಮತ್ತು ತಾಂಡಾಗಳಿಗೆ ಭೇಟಿ ನೀಡಿ ಸರ್ಕಾರದಿಂದ ಲಭ್ಯವಿರುವ ಯೋಜನೆಗಳ ಮಾಹಿತಿ ನೀಡಲಾಗುವುದು ಎಂದರು.

ಎಸ್‌ಸಿ, ಎಸ್‌ಟಿ ನೌಕರರ ಸಂಘದ ನೂತನ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಬಿ.ಪಾಪಯ್ಯ, ಉಪಾಧ್ಯಕ್ಷರಾದ ಪರಮೇಶ್ವರಪ್ಪ, ಗದಿಗೇಶ್, ಪ್ರಧಾನ ಕಾರ್ಯದರ್ಶಿ ಕೆ.ಎಚ್.ಪುಟ್ಟಪ್ಪ, ಖಜಾಂಚಿ ಸೋಮಶೇಖರಪ್ಪ, ಎ.ಕೆ.ಹಾಲಪ್ಪ, ಬಂಗಾರಪ್ಪ, ಸತೀಶ್, ರಾಮಪ್ಪ, ಮಲ್ಲಿಕಾರ್ಜುನ, ದೂದಾನಾಯ್ಕ, ರೇವಣನಾಯ್ಕ, ಸುರೇಶ್‌ನಾಯ್ಕ, ಎಸ್.ವಿ.ನಾಗರಾಜ್, ರಾಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net