ದರ್ಶನ್‌ಗೆ ಪ್ರಿಸನ್ ಕಾಲ್ ಸಿಸ್ಟಮ್ ವ್ಯವಸ್ಥೆ

Published on

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಇಲ್ಲಿನ ಕೇಂದ್ರ ಕಾರಾಗೃಹದ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಯೇ ಪ್ರಿಸನ್ ಕಾಲ್ ಸಿಸ್ಟಮ್ ವ್ಯವಸ್ಥೆ ಕಲ್ಪಿಸಲಾಗಿದೆ.ಆರೋಪಿ ದರ್ಶನ್ ಸೇರಿದಂತೆ ಇತರೆ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ನಾಲ್ವರು ಸಿಬ್ಬಂದಿ ಈ ವ್ಯವಸ್ಥೆಯಿದೆ. ಕೆಲ ದಿನಗಳ ಹಿಂದೆ ಸಾಮಾನ್ಯ ಕೈದಿಗಳ ಪಕ್ಕದಲ್ಲಿನ ಬ್ಯಾರಕ್ ಬಳಿ ಪೋನ್ ಕಲ್ಪಿಸಲಾಗಿತ್ತು. ಆದರೆ, ದರ್ಶನ್ ದೂರವಾಣಿ ಕರೆಗಾಗಿ ತೆರಳಿದ ವೇಳೆ ಸಾಮಾನ್ಯ ಕೈದಿಗಳು ದರ್ಶನ್ ನೋಡಲು ಜೈಲು ಸಿಬ್ಬಂದಿ ಬಳಿ ಕಿರಿಕಿರಿ ಮಾಡುತ್ತಿದ್ದರಿಂದ, ಇದೀಗ ಪ್ರಿಸನ್ ಕಾಲ್ ಸಿಸ್ಟಮ್ ವ್ಯವಸ್ಥೆಯನ್ನು ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಅಳವಡಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಹೈ ಸೆಕ್ಯೂರಿಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಜೈಲು ಸಿಬ್ಬಂದಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net