ದರ್ಶನ್‌ಗೆ ಜೈಲು ನಿಯಮದಂತೆ ಸೌಲಭ್ಯ

Published on

ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೈಲು ನಿಯಮದಂತೆ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದರು.
ಇತ್ತೀಚೆಗೆ ಜೈಲು ಸಿಬ್ಬಂದಿ ಬಳಿ ತಲೆ ದಿಂಬು, ಹಾಸಿಗೆ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ, ಅಧಿಕಾರಿಗಳು ನಿರಾಕರಿಸಿದ್ದರು. ಇದರ ಬಗ್ಗೆ ಕೋರ್ಟ ಮೊರೆ ಹೋಗಿದ್ದ ದರ್ಶನ್ ಪರ ವಕೀಲರಿಗೆ ಜೈಲು ನಿಯಮದಂತೆ ಸೌಲಭ್ಯ ನೀಡಲಾಗುವುದು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ. ಶುಕ್ರವಾರ ಸಂಜೆ ದರ್ಶನ್ ಪರ ವಕೀಲರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಲಿದ್ದರು. ಆದರೆ, ಕೆಲ ಕಾರಣತರಂಗಳಿಂದ ಭೇಟಿ ನೀಡಿಲ್ಲ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net