ದರ್ಶನ್ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು

Published on

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್ ಸೆಲ್‌ಗೆ ಇಲ್ಲಿನ ಕೇಂದ್ರ ಕಾರಾಗೃಹದ ಅಧಿಕಾರಿಗಳು ಇನ್ನೂ ಟಿವಿ ಅಳವಡಿಸಿಲ್ಲ ಎಂದು ಮೂಲಗಳು ತಿಳಿಸಿದವು.
ಈಗಾಗಲೇ ದರ್ಶನ್‌ಯಿರುವ ಸೆಲ್‌ಗೆ ಸದ್ಯ ಕೇಬಲ್ ಅಳವಡಿಸಲಾಗಿದೆ. ಆದರೆ, ಟಿವಿ ರಿಪೇರಿ ಸಮಸ್ಯೆ ಇರುವುದರಿಂದ ಹಾಕಿಲ್ಲ. ದರ್ಶನ್‌ಗೆ ಟಿವಿ ಕೊಟ್ಟರೂ, ಯಾವುದೇ ಸುದ್ದಿ ವಾಹಿನಿಗಳ ವೀಕ್ಷಿಸಲು ಅವಕಾಶ ಇರುವುದಿಲ್ಲ. ಜೈಲು ನಿಯಮದಂತೆ ದೂರದರ್ಶನ (ಡಿಡಿ) ವಾಹಿನಿಗಳು ಮಾತ್ರ ವೀಕ್ಷಿಸಲು ಅವಕಾಶವಿದೆ ಎಂದು ಅಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net