ದರ್ಶನ್ ಗೆ ಹನುಮ ನಾಮ ಸ್ಮರಣೆ ಪುಸ್ತಕ

Published on

ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಇಲ್ಲಿನ ಕೇಂದ್ರ ಕಾರಾಗೃಹದ ಹೈ ಸೆಕ್ಯೂರಿಟಿ ಸೆಲ್ ಗೆ ಹನುಮ ನಾಮ ಸ್ಮರಣೆಯ ಪುಸ್ತಕ ತಲುಪಿದೆ ಎಂದು ಮೂಲಗಳು ತಿಳಿಸಿದವು.
ಅಪರಿಚಿತ ವ್ಯಕ್ತಿಯ ಹೆಸರಿನಲ್ಲಿ ಹನುಮ ನಾಮ ಮತ್ತು ಕಥೆ ಪುಸ್ತಕ ಪೋಸ್ಟರ್ ಮೂಲಕ ಜೈಲಿಗೆ ಬಂದಿದೆ. ಸರ್ವ ಸಂಕಷ್ಟಕ್ಕೆ ಹನುಮಂತನೇ ಪರಿಹಾರ, ಹನುಮನ‌ ಆರ್ಶಿವಾದ ನಿಮ್ಮ ಮೇಲೆ ಇರಲಿದೆ. ಸಂಕಟ ಬಂದಾಗ ಹನುಮ ನಾಮ ಸ್ಮರಣೆ ಮಾಡಿ ಒಳ್ಳೆಯದಾಗುತ್ತದೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಅಪರಿಚಿತರು ಕಳುಹಿಸಿರುವ ಪಾರ್ಸಲ್ ಆಗಿರುವುದರಿಂದ ಜೈಲು ಸಿಬ್ಬಂದಿ ಪರಿಶೀಲಿಸಿ ದರ್ಶನ್ ಸೆಲ್ ಕಳುಹಿಸಲಾಗಿದೆ. ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಭೇಟಿ ನೀಡಿದ ವೇಳೆ ದೇವರ ಪ್ರಸಾದ ಹಾಗೂ ದೇವರಿಗೆ ಅರ್ಚನೆ ಮಾಡಿದ ಕುಂಕುಮ ತಂದು ನೀಡಿದ್ದರು. ಈಗ ದರ್ಶನ್ ಸೆಲ್ ಗೆ ಟಿವಿ ಅಳವಡಿಸುವ ಬಗ್ಗೆ ಮೇಲಾಧಿಕಾರಿಗಳು ಗಮನಕ್ಕೆ ತಂದಿದ್ದು, ಅವರು ಸೂಚಿಸಿದ ನಂತರ ಅಳವಡಿಸಲಾಗುವುದು. ಜೈಲು ನಿಯಮದಂತೆ ಹೈ
ಸೆಕ್ಯೂರಿಟಿ ನಲ್ಲಿರುವ ಹಾಗೂ ಸಾಮಾನ್ಯ ಕೈದಿಗಳು ಆಗಲಿ, ಅವರೇ ಸೆಲ್ ಗಳನ್ನು ಸ್ವಚ್ಚಗೊಳಿಸಬೇಕಾದ ಅನಿವಾರ್ಯತೆಯಿದೆ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net