ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಇನ್ನೂ ಟಿವಿ ಸೌಲಭ್ಯವಿಲ್ಲ.
ಕಳೆದ ಕೆಲ ದಿನಗಳ ಹಿಂದೆ ಹೈ ಸೆಕ್ಯೂರಿಟಿ ಸೆಲ್ ಗೆ ಟಿವಿ ಅಳವಡಿಸುವಂತೆ ದರ್ಶನ್ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಲಾಗಿತ್ತು. ಆದರೆ, ಟಿವಿ ರಿಪೇರಿ ಇರುವುದರಿಂದ ಕೇವಲ ಕೇಬಲ್ ಮಾತ್ರ ಅಳವಡಿಕೆ ಮಾಡಲಾಗಿದೆ. ಇನ್ನೂ ಎರಡ್ಮೂರು ದಿನದಲ್ಲಿ ಟಿವಿ ಅಳವಡಿಸಲಾಗುವುದು. ಗಣೇಶ ಚತುರ್ಥಿ ಹಿನ್ನೆಲೆ ಜೈಲಿನಲ್ಲಿ ಗಣೇಶನ ಪ್ರತಿಷ್ಠಾನೆ ಮಾಡಲಾಗಿತ್ತು. ಆದರೆ, ದರ್ಶನ್ ಗೆ ಮಾತ್ರ ಗಣೇಶನ ದರ್ಶನ ಭಾಗ್ಯವಿಲ್ಲ. ಅಲ್ಲದೆ, ಈ ಪ್ರಕರಣ ಹೈ ಪ್ರೊಪೈಲ್ ಕೇಸ್ ಆಗಿರುವುದರಿಂದ, ಮೊದಲೇ ಗಣೇಶ ದರ್ಶನ ಪಡೆಯಲು ಸಿಬ್ಬಂದಿ ಬಳಿ ದರ್ಶನ್
ಅನುಮತಿ ಪಡೆಯಬೇಕಿತ್ತು. ಆದರೆ, ಗಣೇಶ ವೀಕ್ಷಿಸಲು ಅನುಮತಿ ಕೇಳಿಲ್ಲ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು. ಗಣೇಶ ಹಬ್ಬದ ಸಂಭ್ರಮದಲ್ಲಿಯಾದರೂ ದರ್ಶನ್ ನೋಡುವ ಭಾಗ್ಯ ಕೈದಿಗಳಿಗೆ ಸಿಗಬಹುದು ಎಂಬ ಆಸೆ ಮತ್ತೆ ನಿರಾಸೆಯಾಗಿದೆ.