ದರ್ಶನ್‌ ಅಲ್ಲ ಯಾರೇ ಭಾಗಿಯಾಗಿದ್ರೂ ಶಿಕ್ಷೆಯಾಗಲಿ

Bhavana belagere
Published on

ಚಿತ್ರದುರ್ಗ: ನಗರದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್‌ ಅವರು ಆರೋಪ ಎದುರಿಸುತ್ತಿದ್ದು, ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ ಎಂದು ಪತ್ರಕರ್ತೆ ಭಾವನಾ ಬೆಳಗೆರೆ ಒತ್ತಾಯಿಸಿದರು.

ಮೃತರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ರೇಣುಕಾಸ್ವಾಮಿ ಪತ್ನಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಒಂದು ವೇಳೆ ಹೊಡೆಸಿದ್ದು, ಹೊಡೆದಿದ್ದು ಅಥವಾ ಹೊಡೆಯಿರಿ ಎಂದು ದರ್ಶನ್‌ ಹೇಳಿದ್ದು ನಿಜವಾಗಿದ್ದರೆ ಖಂಡಿತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ದರ್ಶನ್ ಸ್ಥಿತಿಗಿಂತ ಮೃತರ ಪತ್ನಿಯ ಸ್ಥಿತಿ ನೋಡಿ ಮನಸ್ಸಿಗೆ ತುಂಬಾ ನೋವುಂಟಾಗಿದೆ. ಶಾಮಿಯಾನ ನೋಡಿ ಆತನ ಅಜ್ಜಿ ಏನಾದರೂ ಕಾರ್ಯಕ್ರಮ ಇದೆಯೇ ಎಂದು ನನ್ನನ್ನು ಪ್ರಶ್ನಿಸಿದರು. ಮನೆಯಲ್ಲಿ ಯಾರಿಗೂ ಈ ವಿಷಯ ತಿಳಿದಿಲ್ಲ ಎಂದರು.

ಪವಿತ್ರಾ ಗೌಡ ಅವರಿಗೆ ಸಂದೇಶ ಕಳುಹಿಸುತ್ತಿದ್ದ ಎಂಬ ವಿಚಾರ ನನಗೆ ಗೊತ್ತಿಲ್ಲ. ಸೈಬರ್ ಕ್ರೈಮ್‌ಗೆ ದೂರು ಕೊಟ್ಟಿದ್ದರೆ, ಸಾಕಾಗಿತ್ತು. ಅಷ್ಟು ಪರಿಜ್ಞಾನವಾದರೂ ಇರಬೇಕು. ಪ್ರಾಣ ತೆಗೆಯುವ ಮಟ್ಟಕ್ಕೆ ಯಾರೂ ಇಳಿಯಬಾರದು. ಈ ಕೃತ್ಯ ಖಂಡಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net