ದರ್ಶನ ಮ್ಯಾನೇಜರ್ ಕಲಬುರಗಿ ಜೈಲಿಗೆ

GLB_Central Presion Jail
Published on

ಕಲಬುರಗಿ: ಚಿತ್ರದುರ್ಗದ ರೇಣುಕಾಸ್ವಾಮಿ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ ಮ್ಯಾನೇಜರ್ ನಾಗರಾಜನನ್ನು ಕಲಬುರಗಿಗೆ ಜೈಲಿ ಸ್ಥಳಾಂತರ ಮಾಡಿದ್ದು, ಗುರುವಾರ ಜೈಲಿಗೆ ಬರುವ ಸಾಧ್ಯತೆ ಇದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ ಸೇರಿ ಎಲ್ಲ ಆರೋಪಿಗಳನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಿದ್ದು, ಅದರಲ್ಲಿ ಮ್ಯಾನೇಜರ್ ನಾಗರಾಜನನ್ನು ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ವಿಚಾರಾಧೀನ ಕೈದಿ: ಕಲಬುರಗಿ ಜಿಲ್ಲಾ ಕಾರಾಗೃಹದಲ್ಲಿ ರಾಜಾತಿಥ್ಯ ಪದ್ಧತಿಯೇ ಇಲ್ಲ. ನಟ ದರ್ಶನ ಮ್ಯಾನೇಜರ್ ನಾಗರಾಜನನ್ನು ಸ್ಥಳಾಂತರಿಸುವ ಬಗ್ಗೆ ಮಾಹಿತಿ ಬಂದಿದೆ. ವಿಚಾರಾಧೀನ ಕೈದಿಯಾಗಿ ಆರಂಭದಲ್ಲಿ ೧೪ ದಿನ ಕ್ವಾರಂಟೈನ್ ಇಟ್ಟು, ನಂತರ ಎಲ್ಲರ ಮಾದರಿಯಲ್ಲಿಯೇ ಸೌಲಭ್ಯ ಇರಲಿವೆ. ವಿಶೇಷ ಸೌಲಭ್ಯ ಇಲ್ಲ ಎಂದು ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ ತಿಳಿಸಿದ್ದಾರೆ. ಕಲಬುರಗಿ ಕಾರಾಗೃಹದಲ್ಲಿ ೧೨ ಸೆಲ್‌ಗಳಿದ್ದು, ೫೪೫ ಕೈದಿಗಳಿಗೆ ಅವಕಾಶವಿದ್ದು, ಪ್ರಸ್ತುತ ೬೩೦ ಕೈದಿಗಳಿದ್ದಾರೆ.

ಕಾರಾಗೃಹದಲ್ಲಿ ರಾಜಾತಿಥ್ಯ ಪದ್ಧತಿಯೇ ಇಲ್ಲ. ಎಲ್ಲರಿಗೂ ಒಂದೇ ವ್ಯವಸ್ಥೆ, ಸೌಲಭ್ಯಗಳು ಇರಲಿವೆ. ವಿಶೇಷ ಸೌಲಭ್ಯ, ವಿಐಪಿ ವ್ಯವಸ್ಥೆಗಳು ಇಲ್ಲ. ಗುಂಡಾಗಳು, ಭಯೋತ್ಪಾದಕರು, ವಿಐಪಿಗಳು ಇದ್ದರೆ ಅವರಿಗೆ ಏನು ಆಗಬಾರದು ಎಂದು ಪ್ರತ್ಯೇಕವಾಗಿ ಇಡಲಾಗುತ್ತೆ, ವಿನಾಃ ವಿಐಪಿ ಅಂತ ಅಲ್ಲ. ಎಲ್ಲ ಕೈದಿಗೆ ಇರುವ ವ್ಯವಸ್ಥೆ ಒಂದೆಯಾಗಿದೆ. ಜೈಲನ್ನು ಮುಕ್ತವಾಗಿ ನೋಡದಿರುವುದರಿಂದ ಈ ಕಲ್ಪನೆಗಳು ಇವೆ.
| ಡಾ.ಪಿ.ರಂಗನಾಥ, ಮುಖ್ಯ ಅಧೀಕ್ಷಕ
ಕಲಬುರಗಿ ಕೇಂದ್ರ ಕಾರಾಗೃಹ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net