ದರೋಡೆಗೆ ಹೊಂಚು ಹಾಕುತ್ತಿದ್ದವರ ಬಂಧನ

Published on


ಕಲಬುರಗಿ : ಹುಮನಾಬಾದ-ಕಲಬುರಗಿ ಹೆದ್ದಾರಿಯಲ್ಲಿರುವ ಇಲ್ಲಿಗೆ ಸಮೀಪದ ಬೇಲೂರ ಕ್ರಾಸ್ ಹತ್ತಿರದಲ್ಲಿ ಸವಾರರನ್ನು ಹಾಗೂ ವಾಹನ ಚಾಲಕರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಗ್ಯಾಂಗ್‌ನ ಮೂವರನ್ನು ಉಪನಗರ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ಕಾಲಗೋಡಾ ಮುಬಿನ್, ಸೈಯದ್ ಆವೇಜ್ ಮತ್ತು ಮಹ್ಮದ್ ಇಸಾಮುದ್ದೀನ್ ಬಂಧಿತರು. ಪೊಲೀಸರು ದಾಳಿ ನಡೆಸಿದ ಕಾಲಕ್ಕೆ ಇನ್ನೂ ಮೂವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಬಂಧಿತರ ಬಳಿಯಿದ್ದ ಎರಡು ಬೈಕ್, ಏಳು ಮೊಬೈಲ್, ಹಗ್ಗ, ರಾಡ್, ಬಡಿಗೆ, ತಲವಾರ ಮೊದಲಾದವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಲಿಮೋದ್ದೀನ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net