ದರೋಡೆ ಪ್ರಕರಣದ ಐವರ ಬಂಧನ

IMG-20221217-WA0072.jpg
Published on

ದಾವಣಗೆರೆ: ಐವರು ಆರೋಪಿಗಳನ್ನು ಬಂಧಿಸಿರುವ ಹೊನ್ನಾಳಿ ಹಾಗೂ ನ್ಯಾಮತಿ ಠಾಣೆ ಪೊಲೀಸರು, ದರೋಡೆಯಾಗಿದ್ದ ಬುಲೆರೊ ಪಿಕ್‌ಅಪ್ ಗೂಡ್ಸ್ ವಾಹನ ಸೇರಿ 2 ಸ್ಕೂಟಿ, 1.48 ಲಕ್ಷ ರೂ. ನಗದು ಸಹಿತ ಒಟ್ಟು 9.66 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಶಿಕಾರಿಪುರದ ಶಕೀಲ್ ಅಹ್ಮದ್, ಫೈರೋಜ್, ಸೈಯದ್ ಸಾಧಿಕ್, ವಾಸೀಂ, ಶಿವಮೊಗ್ಗದ ಇಮ್ರಾನ್ ಷರೀಪ್ ಬಂಧಿತ ಆರೋಪಿಗಳು. ಎಲ್ಲರೂ ಚಾಲಕ ಹಾಗೂ ಗಾರೆ ಕೆಲಸದವರಾಗಿದ್ದಾರೆ. ಶನಿವಾರ ಬೆಳಗ್ಗೆ ಪೊಲೀಸರು ಸವಳಂಗ ವೃತ್ತದ ಬಳಿ ಗಸ್ತು ನಡೆಸುತ್ತಿದ್ದಾಗ, ಗೂಡ್ಸ್ ವಾಹನ ತಿರುಗಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ ಆರೋಪಿತರನ್ನು ಹಿಡಿದು ವಿಚಾರಣೆ ಮಾಡಲಾಗಿ ನ್ಯಾಮತಿ ಠಾಣೆ ವ್ಯಾಪ್ತಿಯಲ್ಲಿ 7.38 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನ ದರೋಡೆ ಮಾಡಿದ್ದು ಬಯಲಾಗಿದೆ. ಉಳಿದಂತೆ ತಲಾ 40 ಸಾವಿರ ರೂ. ಬೆಲೆಯ ಎರಡು ಸ್ಕೂಟಿ ಪತ್ತೆಯಾಗಿವೆ. ಚನ್ನಗಿರಿ ಡಿವೈಎಸ್ಪಿ ಡಾ.ಕೆ.ಎಂ.ಸಂತೋಷ್ ಮಾರ್ಗದರ್ಶನದಲ್ಲಿ ಹೊನ್ನಾಳಿಯ ಪೊಲೀಸ್ ನಿರೀಕ್ಷಕ ಎಚ್.ಎಂ. ಸಿದ್ದೇಗೌಡ, ನ್ಯಾಮತಿ ಠಾಣೆ ಪಿಎಸ್‌ಐ ಪಿ.ಎಸ್. ರಮೇಶ್ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್ಪಿ ಆರ್.ಬಿ.ಬಸರಗಿ ಶ್ಲಾಘಿಸಿದ್ದಾರೆ. ----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net