

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಹೊಸಹಳ್ಳಿ ಅಡಕೆ ವ್ಯಾಪಾರಿಗೆ ಸೇರಿದ 1.50 ಕೋಟಿ ರೂ.ದರೋಡೆ ಪ್ರಕರಣದಲ್ಲಿ ಈಗಾಗಲೇ 10 ಆರೋಪಿ ಗಳನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು, ಉಳಿದ ಮೂವರ ಪತ್ತೆ ಕಾರ‌್ಯ ಮುಂದುವರಿಸಿದ್ದಾರೆ. ಬಂಧಿತರಿಂದ 63. 25 ಲಕ್ಷ ರೂ.ನಗದು, 2 ಕಾರು, ಒಂದು ಹೊಸ ದ್ವಿಚಕ್ರ ವಾಹನ ಸಹಿತ ಮೂರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಲ್ಲಿ ಒಬ್ಬನಾಗಿರುವ ಬೆಂಗಳೂರಿನ ಪೀಣ್ಯ ದೊಡ್ಡ ಬಿದರಕಲ್ಲಿನ ಬಿ.ಶ್ರೀನಿವಾಸ ಅಲಿಯಾಸ್ ಆಚಾರಿಸೀನನ ಪಾತ್ರ ಪ್ರಮುಖ ವಾಗಿದ್ದು, ವಸತಿಗೃಹಗಳನ್ನು ಜಾಲಾಡುತ್ತಿದ್ದ ವೇಳೆ ದೊರೆತ ಮೊಬೈಲ್‌ನ ಒಂದರ ಅಸಲಿ ನಂಬರ್ ಆರೋಪಿಗಳು ಸುಳಿವು ನೀಡಿತ್ತು ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ತಿಳಿಸಿದ್ದಾರೆ.
ಒಬ್ಬನ ಬಂಧನವಾಗುತ್ತಿದ್ದಂತೆ, 9 ಮಂದಿಯನ್ನೂ ಕೆಲವೇ ದಿನಗಳಲ್ಲಿ ವಶಕ್ಕೆ ಪಡೆಯಲಾಯಿತು. ಈಗ ಇನ್ನೂ ಮೂವರನ್ನು ಪತ್ತೆ ಮಾ ಡಿ, ಅವರಿಂದಲೂ ಉಳಿದ ಹಣವನ್ನು ವಶಕ್ಕೆ ಪಡೆಯಬೇಕಿದೆ. ಶೀಘ್ರವೇ ಆರೋಪಿಗಳ ಐಡೆಂಟಿಫಿಕೇಶನ್ ಪರೇಡ್ ನಡೆಸಲಾಗುವುದು ಎಂದು ಎಸ್‌ಪಿ ಹೇಳಿದರು.