

ಸಿರಿಗೇರಿ: ಸ್ಥಳೀಯ ಗ್ರಾಪಂ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಪಿಡಿಒ ಹುಸೇನ್ ಪೀರ ಸಾಬ್ ಮಾತನಾಡಿ, ಬ್ರಿಟಿಷರ ದಬ್ಬಾಳಿಕೆಯನ್ನು ಹೋಗಲಾಡಿಸಿದ ಕೀರ್ತಿ ದೇಶದ ಸ್ವಾತಂತ್ರೃ ಹೋರಾಟಗಾರರಿಗೆ ಸಲ್ಲುತ್ತದೆ ಎಂದರು. ಗ್ರಾಪಂ ಕಾರ್ಯದರ್ಶಿ ಸಿದ್ದರಾಮ, ಅಧ್ಯಕ್ಷೆ ಲಕ್ಷ್ಮೀ ಕೆ.ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲಗಪ್ಪ, ಸದಸ್ಯರಾದ ಅಡಿವೆಯ್ಯ ಸ್ವಾಮಿ, ಸಲೀಂ, ಕೆ ದ್ಯಾವಣ್ಣ, ಸಾಹಿತಿ ಎನ್.ಕುಮಾರ್, ಮಹಮದ್, ವಕೀಲ ಶೇಖರ್, ಆಲಂ ಬಾಷಾ, ಸಿಬ್ಬಂದಿ ರುದ್ರೇಶ, ಫಯಾಜ್, ಹುಲುಗಪ್ಪ ಲೋಕೇಶ್, ನಾಗರಾಜ್, ನಿಮಗಾಗಿ ನಾವು ಸಂಸ್ಥೆಯ ಗೌರವಾಧ್ಯಕ್ಷ ವಿ.ಹನುಮೇಶ ಇದ್ದರು.