ದಫನ್‌ಗೊಂಡ ಆಲಾಯಿ ದೇವರು

29-07KKR-01
ಕಕ್ಕೇರಾದಲ್ಲಿ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
Published on

ಕಕ್ಕೇರಾ: ಪಟ್ಟಣದಲ್ಲಿ ಮೊಹರಂ ಹಬ್ಬದ ಕಡೇ ದಿನವಾದ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಆಲಾಯಿ ದೇವರು ಯಮನೂರಪ್ಪ ದೇವರ ಸನ್ನಿಧಾನದಲ್ಲಿ ದಫನ್‌ಗೊಂಡರು.

ಪಟ್ಟಣದ ಸರ್ಕಾರಿ, ಶ್ಯಾನೇರ್, ಕಿಲ್ಲೇದರ ಹಾಗೂ ರಾವುತರ ಮಸೀದಿಗಳಿಂದ ೧೧ ಆಲಾಯಿ ದೇವರನ್ನು ಮಂಗಳವಾರ ಪ್ರತಿಷ್ಠಾಪಿಸಲಾಗಿತ್ತು. ಭಕ್ತರು ಹೂ-ಹಣ್ಣು, ಕೆಂಪು ಸಕ್ಕರೆ ಸಮರ್ಪಿಸುವ ಮೂಲಕ ಭಕ್ತಿ ಮೆರೆದರು. ಶುಕ್ರವಾರ ಖತಲ್ ರಾತ್ರಿಯಂದು ಎಲ್ಲ ಮಸೀದಿಗಳ ಮುಂದಿರುವ ಅಗ್ನಿಕುಂಡದ ಎದುರು ಯುವಕರು ಹಲಗೆ, ವಾದ್ಯದೊಂದಿಗೆ ಕುಣಿದು ಕುಪ್ಪಳಿಸಿದರು.

ಶನಿವಾರ ಸಂಜೆ ೪ಕ್ಕೆ ವಾದ್ಯ-ಮೇಳದೊಂದಿಗೆ ಮಸೀದಿಗಳಿಂದ ಹೊರಬಂದ ಆಲಾಯಿ ದೇವರು ಹಳೇ ಬಜಾರ್, ಅಗಸಿ, ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತಗಳ ಮೂಲಕ ಯಮೂನರಪ್ಪ ದೇವಸ್ಥಾನದಲ್ಲಿ ದಫನ್ ಆಗುವ ಮೂಲಕ ಮೊಹರಂ ಆಚರಣೆಗೆ ತೆರೆ ಬಿತ್ತು. ಉಪ ಪೊಲೀಸ್ ಠಾಣಾಧಿಕಾರಿ ಮಧು ನಾಯಕ ಬಂದೋಬಸ್ತ್ ಮಾಡಿದ್ದರು.

ಕೊಡೇಕಲ್: ಭಾವೈಕ್ಯದ ಮೊಹರಂ ಹಬ್ಬ ಕೊಡೇಕಲ್ ಸೇರಿ ರಾಜನಕೋಳೂರ, ನಾರಾಯಣಪುರ, ಮದಲಿಂಗನಾಳ, ಯರಕಿಹಾಳ, ಬೂದಿಹಾಳ ಗ್ರಾಮಗಳಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ಶನಿವಾರ ಆಲಾಯಿ ದೇವರ ಕಟ್ಟೆ ಎದುರು ದಿನವಿಡೀ ಹೆಜ್ಜೆ(ಆಲಾಯಿ) ಹಾಕುತ್ತ ಯುವಕರು ಸಂಭ್ರಮಿಸಿದರು. ಪ್ಯಾಟಿ ಪ್ರದೇಶದ ಯುವಕರು ಆಲಾಯಿ ಆಡುತ್ತ ಮಡಿಕೆಗೆ ಹೆಣಿಕೆ ಹಾಕಿ ಹೆಜ್ಜೆ ಹಾಕುವ ಮೂಲಕವೇ ಹೆಣಿಕೆ ಬಿಚ್ಚುವುದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

ರಾಜಾ ಜಿತೇಂದ್ರ ನಾಯಕ ಜಹಾಗೀರದಾರ, ಹನುಮಂತ ನಾಯಕ (ಬಬಲುಗೌಡ), ಮಲ್ಲು ನವಲಗುಡ್ಡ ಇತರರಿದ್ದರು. ಶನಿವಾರ ಸಂಜೆಯಿಂದಲೇ ಅಹೋರಾತ್ರಿ ಆಲಾಯಿ ದೇವರನ್ನು ಹೊತ್ತು ಗ್ರಾಮ ಪ್ರದಕ್ಷಿಣೆ ಹಾಕಿದ ಬಳಿಕ ದಫನ್ ಮಾಡಲಾಯಿತು. ನಂತರ ಭಕ್ತರುಕರ್ಪೂರ, ಊದುಬತ್ತಿ, ಸಕ್ಕರೆ ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net