ದಫನ್ ಮೆರವಣಿಗೆ ವೇಳೆ ಹಲ್ಲೆ

ibrimpur
Published on

ಯಾದಗಿರಿ: ಮೊಹರಂ ಹಬ್ಬದ ದಫನ್ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ ಹಿನ್ನಲೆಯಲ್ಲಿ ನಾಲ್ಕು ಜನರಿಗೆ ಗಾಯಗಳಾದ ಘಟನೆ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಭೀಮರಾಯ ಸೋಪಣ್ಣ, ಕಾಶಮ್ಮ ಭೀಮರಾಯ, ಮರೆಮ್ಮ ಶಿವರಾಯ, ನಿಂಗಪ್ಪ ಗಾಯಗೊಂಡವರು. ಮೆರವಣಿಗೆ ವೇಳೆ ಭೀಮರಾಯ ಸೋಪಣ್ಣ ತಾನು ಧರಿಸಿದ ಫಕೀದರ್ಾರವನ್ನು ಪೀರನ ಹುಡಿಯಲ್ಲಿ ಹಾಕಲು ಹೋದ ವೇಳೆಯಲ್ಲಿ ಆಯ ತಪ್ಪಿ ವ್ಯಕ್ತಿಯೊಬ್ಬನ ಕಾಲು ತುಳಿದಿದ್ದಾನೆ. ಸಿಟ್ಟಿಗೆದ್ದ ಆ ವ್ಯಕ್ತಿ ಮತ್ತು ಇತರರ ಮಧ್ಯೆ ಮಾತಿಗೆ ಮಾತು ಬೆಳೆದು ಬಡಿಗೆಗಳಿಂದ ಹಲ್ಲೆ ಮಾಡಲಾಗಿದೆ.

ಗಾಯಾಳುಗಳು ಶಹಾಪುರ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಸಿಪಿಐ ಚನ್ನಯ್ಯ ಹಿರೇಮಠ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net