ದನದ ಕೊಟ್ಟಿಗೆಗೆ ಬಂದಿದ್ದ ಬೃಹತ್ ಹೆಬ್ಬಾವು ಕಾಡಿಗೆ

IMG-20220907-WA0015
Published on

ಧಾರವಾಡ: ಇಲ್ಲಿನ ಹೊಯ್ಸಳ ನಗರದ ಇಸ್ಮಾಯಿಲ್ ಪೆಂಡಾರಿ ಎಂಬುವರ ದನದ ಕೊಟ್ಟಿಗೆಗೆ ಬುಧವಾರ ನುಗ್ಗಿದ್ದ ಬೃಹತ್ ಹೆಬ್ಬಾವು ಸುತ್ತಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಇಸ್ಮಾಯಿಲ್ ಅವರು ಉರಗ ರಕ್ಷಕ ಸ್ನೇಕ್ ನಜೀರ್ ಶೇಖ್ ಅವರ ಗಮನಕ್ಕೆ ತಂದರು. ಕೂಡಲೇ ಸ್ಥಳಕ್ಕೆ ಧಾವಿಸಿದ ನಜೀರ್ ಕೊಟ್ಟಿಗೆಯಲ್ಲಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು. 10 ಅಡಿಗೂ ಹೆಚ್ಚು ಉದ್ದದ ಹೆಬ್ಬಾವು ಜನವಸತಿ ಪ್ರದೇಶಕ್ಕೆ ನುಗ್ಗಿದ್ದು ಧಾರವಾಡದಲ್ಲಿ ಇದೇ ಮೊದಲು.
ಕಾರ್ಯಾಚರಣೆ ನಡೆಸಿದ ನಜೀರ್ ಶೇಖ್ ಅವರ ಕಾಳಜಿಯನ್ನು ಜನರು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net