ದನಗಳ ಸಂತೆ ಪುನರಾರಂಭಿಸಲು ಮನವಿ

14Jaggu1
ಬೆಳಗಾವಿ ಎಪಿಎಂಸಿಯಲ್ಲಿ ದನಗಳ ಸಂತೆ ನಡೆಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಕೃಷಿ ಆಧಾರಿತ ದನಗಳ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು. ಪ್ರವೀಣ ತೇಲಿ, ನಾರಾಯಣ ಪಾಟೀಲ, ರಾಮಲಿಂಗ ನಾಯಕ, ಪರಶುರಾಮ ಮರಗನ್ನವರ ಇತರರಿದ್ದರು.
Published on

ಬೆಳಗಾವಿ: ಬೆಳಗಾವಿ ಎಪಿಎಂಸಿಯಲ್ಲಿ ದನಗಳ ಸಂತೆ ನಡೆಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ಕೃಷಿ ಆಧಾರಿತ ದನಗಳ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.

ಮಹಾನಗರ ಪಾಲಿಕೆ ವ್ಯಾಪ್ತಿಯ ಎಪಿಎಂಸಿ ಯಾರ್ಡ್‌ನಲ್ಲಿ ದನಗಳ ಸಂತೆ ನಡೆಯುತ್ತಿತ್ತು. ಸಂತೆಯಿಂದ ರೈತರಿಗೆ ದನಗಳ ಮಾರಾಟ ಮಾಡಲು ಹಾಗೂ ಖರೀದಿಸಲು ಅನುಕೂಲವಾಗುತ್ತಿತ್ತು. ಆದರೆ, ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಿದ್ದರಿಂದ ಸಂತೆ ಬಂದ್ ಮಾಡಲಾಗಿತ್ತು. ಆದರೆ, ಈಗ ರೋಗ ತಗ್ಗಿದೆ. ಹಾಗಾಗಿ, ಸಂತೆಯನ್ನು ಮರು ಆರಂಭಿಸಬೇಕು ಎಂದು ಮನವಿ ಸಲ್ಲಿಸಿದರು.

ಪ್ರವೀಣ ತೇಲಿ, ನಾರಾಯಣ ಪಾಟೀಲ, ರಾಮಲಿಂಗ ನಾಯಕ, ಪರಶುರಾಮ ಮರಗನ್ನವರ, ಶುಭಂ ಪಾಟೀಲ, ಇಬ್ರಾಹಿಂ ಬೇಪಾರಿ, ಸುನಿಲ್ ಕುಟ್ರೆ, ಇಮ್ರಾನ್ ಬೇಪಾರಿ, ಪ್ರತಾಪ ಪಾಟೀಲ, ಬಾಲಕೃಷ್ಣ ಖೋನೆಕರ ಹಾಗೂ ಸಂಘದ ಇತರ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net