ದತ್ತನ ದರ್ಶನ ಪಡೆದ ಡಿಕೆಶಿ

0408AFZ01
Published on

ಅಫಜಲಪುರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ದೇವಲಗಾಣಗಾಪೂರಕ್ಕೆ ಮಂಗಳವಾರ ಭೇಟಿ ನೀಡಿ ದತ್ತ ಮಹಾರಾಜರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಕರೊನಾದಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಕರೊನಾ ತೊಲಗಿ ನಾಡಿನ ಜನರು ಸುಖ, ಶಾಂತಿ, ನೆಮ್ಮದಿಯಿಂದ ಉತ್ತಮ ಜೀವನ ನಡೆಸುವಂತಾಗಲಿ ಎಂದು ದತ್ತನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಕರೊನಾ ಸೋಂಕು ತಗುಲಿದ್ದು, ಅವರಿಬ್ಬರೂ ಶೀಘ್ರ ಗುಣಮುಖರಾಗುವಂತೆ ಬೇಡಿಕೊಂಡಿದ್ದೇನೆ ಎಂದರು.
ಶಾಸಕರಾದ ಎಂ.ವೈ.ಪಾಟೀಲ್, ಪ್ರಿಯಾಂಕ್ ಖರ್ಗೆ , ಡಾ. ಅಜಯಸಿಂಗ್ , ಶರಣಪ್ಪ ಮಟ್ಟೂರ, ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್, ಸಿದ್ದರಾಮ ಮೇತ್ರೆ, ಜಿಪಂ ಸದಸ್ಯ ಅರುಣಕುಮಾರ ಪಾಟೀಲ್, ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಪ್ರಮುಖರಾದ ರಾಜೇಂದ್ರ ಪಾಟೀಲ್ ರೇವೂರ, ಜೆ.ಎಮ್.ಕೊರಬು, ಮಕಬೂಲ್ ಪಟೇಲ್, ಮತೀನ ಪಟೇಲ್, ಮಹಾಂತೇಶ ಪಾಟೀಲ್, ತುಕಾರಾಮಗೌಡ ಪಾಟೀಲ್, ಪ್ರಕಾಶ ಜಮಾದರ, ಉದಯ ಭಟ್, ಶಿವಾನಂದ ಗಾಡಿಸಾಹುಕಾರ, ಶರಣು ಕುಂಬಾರ, ಮಹಿಬೂಬ ಪಟೇಲ್ ಕಲ್ಲೂರ, ಗುಂಡಪ್ಪ ಹೊಸಮನಿ, ಚಂದು ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net