

ಬೇಲೂರು: ದತ್ತ ಜಂಯಂತಿ ಅಂಗವಾಗಿ ಬೇಲೂರಿನಲ್ಲಿ ವಿಶ್ವ ಹಿಂದೂ ಪರಿ?ತ್, ಭಜರಂಗದಳ ಕಾರ್ಯಕರ್ತರು ಬೈಕ್ ಜಾಥಾ ಸೇರಿದಂತೆ ವಿವಿಧ ವಾಹನಗಳ ಮೂಲಕ ಘೋಷಣೆಗಳನ್ನು ಕೂಗುತ್ತ ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳಿದರು.
ಸಕಲೇಶಪುರ, ಅರೇಹಳ್ಳಿ, ಬಿಕ್ಕೋಡು, ಚೀಕನಹಳ್ಳಿ, ಗೆಂಡೇಹಳ್ಳಿ ಭಾಗಗಳಿಂದ ಬೈಕ್ ಸೇರಿದಂತೆ ವಿವಿಧ ವಾಹನಗಳಲ್ಲಿ ಆಗಮಿಸಿದ್ದ ನೂರಾರು ಯುವಕರು, ದತ್ತಾತ್ರೇಯ ಹಾಗೂ ಶ್ರೀರಾಮ ಭಾವ ಚಿತ್ರದೊಂದಿಗೆ ಬೇಲೂರಿನ ಚನ್ನಕೇಶವಸ್ವಾಮಿ ದೇಗುಲ ಆವರಣಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ವಿವಿಧ ಘೋಷಣೆಗಳೊಂದಿಗೆ ಚಿಕ್ಕಮಗಳೂರಿನ ದತ್ತ ಪೀಠದತ್ತ ಒಂದು ವಾಹನದ ಹಿಂದೆ ಮತ್ತೊಂದು ವಾಹನಗಳಂತೆ ಸಾಲಿನಲ್ಲಿ ತೆರಳಿದರು.
ದತ್ತ ಜಯಂತಿ ಅಂಗವಾಗಿ ಬೇಲೂರು ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶವಾಗದಂತೆ ಬೇಲೂರು ತಾಲೂಕಿನಾಧ್ಯಂತ ಮತ್ತು ಪಟ್ಟಣದ ಸೂಕ್ಷ್ಮ ಹಾಗೂ ವಿವಿಧ ಸ್ಥಳಗಳಲ್ಲಿ ಅರಸೀಕೆರೆ ಡಿವೈಎಸ್‌ಪಿ ಅಶೋಕ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್, ವೃತ್ತ ನಿರೀಕ್ಷಕ ಶ್ರೀಕಾಂತ್ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಬಿಗಿ ಪೊಲೀಸ್ ಬಂದೂ ಬಸ್ತ್ ಏರ್ಪಡಿಸಲಾಗಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್, ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ಮುಖಂಡರಾದ ಸಿದ್ದೇಶ್ ನಾಗೇಂದ್ರ, ಅಮೀತ್ ಕುಮಾರ್ ಶೆಟ್ಟಿ, ಸಂತೋಷ್ ಸೇರಿದಂತೆ ಇತರರು ಶುಭ ಹಾರೈಸಿದರು.