ದಡ್ಡನನ್ನು ಜಾಣನನ್ನಾಗಿ ಮಾಡುವ ಗ್ರಂಥಾಲಯ

PH 02
Published on

ಕಲಬುರಗಿ: ಬದುಕಿನಲ್ಲಿ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ತಲುಪಲು ಗ್ರಂಥಾಲಯಗಳ ಪಾತ್ರ ಬಹುದೊಡ್ಡದು ಎಂದು ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿ, ಯಾವೊಬ್ಬ ವಿದ್ಯಾರ್ಥಿಯು ಎದರಲ್ಲಿಯೂ ಕಡಿಮೆ ಇಲ್ಲ. ನಿರಂತರ ಪರಿಶ್ರಮದಿಂದ ಅವರು ಜ್ಞಾನರ್ಜನೆಯನ್ನು ಬೆಳಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಬಹಳ ಬುದ್ಧಿವಂತ ಮತ್ತು ಪ್ರತಿಭಾವಂತರು. ಅವರಿಗೆ ಒಂದು ವೇದಿಕೆ ಸಿಗಬೇಕು. ಎಂತಹ ದಡ್ಡನನ್ನು ತಂದು ಗ್ರಂಥಾಲಯದಲ್ಲಿ ಕೂಡಿಸಿದರೆ ತನಗೆ ಗೊತ್ತಿಲ್ಲದ ಹಾಗೆ ಅವನನ್ನು ಜಾಣ್ಮೆ ಮಾಡುವ ಶಕ್ತಿ ಗ್ರಂಥಾಲಯಕ್ಕೆ ಇದೆ ಎಂದು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಪ್ರಸ್ತಾವಿಕವಾಗಿ ಮಾತನಾಡಿದರು. 

ಡಾ.ಅಂಬೇಡ್ಕರ್ ಮತ್ತು ಗ್ರಂಥಾಲಯ ಕುರಿತು ಭಾಷಣ ಸ್ಪರ್ಧೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪ್ರಬಂಧ ಸ್ಪರ್ಧೆ ಮಾಡಲಾಯಿತು. ಪ್ರಥಮ ಬಹುಮಾನ ಮತ್ತು ದ್ವಿತೀಯ, ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನಗದು ಬಹುಮಾನ ನೀಡಲಾಯಿತು. 

ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಉದ್ಘಾಟಿಸಿದರು. ಡಾ. ಪ್ರವೀಣ್ ಕುಮಾರ್ ಕುಂಬಾರಗೌಡ್ರು ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್ ರಂಗನಾಥ್ ಅವರ ಜೀವನ ಮತ್ತು ಸಾಧನೆ ಕುರಿತು ಪರಿಚಯ ಮಾಡಿದರು. ಡಾ. ರಮೇಶ ಲಂಡನಕರ್, ಡಾ. ಮಮತಾ ಮೇಸ್ತ್ರಿ ಇತರರು ಹಾಜರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net