

ಬೀದರ್: ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಂದ್ರಾಸಿಂಗ್ ವಿವಿಧೆಡೆ ಪ್ರಚಾರ ನಡೆಸಿದರು.
ಬರೂರ, ಆಣದೂರ ವಾಡಿ, ಮಂದಕನಳ್ಳಿ, ಹೊನ್ನಡ್ಡಿಗಳಲ್ಲಿ ಪ್ರಚಾರ ನಡೆಸಿ, ಒಂದು ದಶಕದಿಂದ ಕ್ಷೇತ್ರದಲ್ಲಿದ್ದು ಪಕ್ಷದ ಸಂಘಟನೆ ಜತೆ ಜನರ ಕಷ್ಟ-ಸುಖದಲ್ಲಿ ಭಾಗಿಯಾಗಿದ್ದೇನೆ. ಆದರೆ ಪಕ್ಷ ನನಗೆ ಅನ್ಯಾಯ ಮಾಡಿದೆ. ಕಾರ್ಯಕರ್ತರ ದಂಡು ನನ್ನ ಬೆನ್ನಿಗೆ ನಿಂತಿದೆ. ಜನರು ಹೊಸ ಮುಖ ನೋಡಲು ಬಯಸಿದ್ದಾರೆ. ಪಕ್ಷೇತರ ಅಭ್ಯರ್ಥಿ ತವರು ದಕ್ಷಿಣ ಕ್ಷೇತ್ರವಾಗಲಿದೆ ಎಂದರು.
ಈ ಸಲ ನನ್ನನ್ನು ಖಂಡಿತವಾಗಿ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸದೊಂದಿಗೆ ಪ್ರಚಾರ ಮಾಡುತ್ತಿರುವೆ ಎಂದು ತಿಳಿಸಿದರು.