ದಕ್ಷಿಣ ಮಂಡಲ ಬಿಜೆಪಿ ಪದಾಧಿಕಾರಿಗಳ ನೇಮಕ

SRINIVAS desai
Published on

ಕಲಬುರಗಿ: ಭಾರತೀಯ ಜನತಾ ಪಕ್ಷದ ದಕ್ಷಿಣ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷ ಸ್ಥಾನಕ್ಕೆ ಪದಾಧಿಕಾರಿಗಳನ್ನು ನೇಮಿಸಿ ಮಂಡಲ ಅಧ್ಯಕ್ಷ ಶ್ರೀನಿವಾಸ ದೇಸಾಯಿ ಆದೇಶಿಸಿದ್ದಾರೆ. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಆದೇಶದ ಮೇರೆಗೆ ನೇಮಕ ಮಾಡಿದ್ದು, ಪಕ್ಷದ ಜವಾಬ್ದಾರಿ ವಹಿಸಿಕೊಂಡು ತಳಮಟ್ಟದಲ್ಲಿ ಸಂಘಟನೆ ಮಾಡಲು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ದಕ್ಷಿಣ ಮಂಡಲ ಮೋರ್ಚಾಗಳ ಅಧ್ಯಕ್ಷರು: ಅಮಿತ ಚಿಟಗುಪ್ಪಿ (ಯುವ ಮೋರ್ಚಾ), ಜ್ಯೋತಿ ಪಾಟೀಲ್(ಮಹಿಳಾ ಮೋರ್ಚಾ), ಹಣಮಂತ ವಚ್ಚಾ (ಎಸ್ಸಿ ಮೋರ್ಚಾ), ರಾಘವೇಂದ್ರ ಸುರಪೂರಕರ್ (ಎಸ್.ಟಿ.ಮೋರ್ಚಾ), ಗಂಗಾಧರ ಮಾಮಡೆ (ಓಬಿಸಿ ಮೋರ್ಚಾ), ಮಹ್ಮದ್ ಅಬ್ದುಲ್ ಅಲೀಂ (ಅಲ್ಪಸಂಖ್ಯಾತ ಮೋರ್ಚಾ)ರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net