ದಂತ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯ ; ಶಾಸಕ, ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅಭಿಮತ

1
Published on

ತುಮಕೂರು: ಇಂದಿನ ಕಾಲಟ್ಟಕ್ಕೆ ತಕ್ಕಂತೆ ದಂತ ಶಿಕ್ಷಣ ೇತ್ರದಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಅಖಿಲ ಭಾರತ ದಂತ ವೈದ್ಯಕಿಯ ಪರಿಷತ್​ ಜತೆ ಸೇರಿಕೊಂಡು ಕಾರ್ಯಯೋಜನೆ ರೂಪಿಸಬೇಕಿದೆ ಎಂದು ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.

ನಗರ ಹೊರವಲಯದ ಅಗಳಕೋಟೆಯ ಸಿದ್ಧಾರ್ಥ ದಂತ ವೈದ್ಯಕಿಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಬುಧವಾರ ಹೈಟೆಕ್​ "ಸಿದ್ಧಾರ್ಥ ಸ್ಮೆಲ್ಸ್​ ' ನೂತನ ಚಿಕಿತ್ಸಾ ಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಂತ ವೈದ್ಯಕಿಯ ೇತ್ರ ಕವಲು ದಾರಿಯಲ್ಲಿ ಸಾಗಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯವಿದೆ. ಅಂತಾರಾಷ್ಟ್ರೀಯ ಮಟ್ಟದ ಸಲಕರಣೆಗಳನ್ನು ಒಳಗೊಂಡ ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದಾಗ ಇಂದಿನ ಪೈಪೋಟಿ ಎದುರಿಸಲು ಸಾಧ್ಯ ಎಂದರು.

ದೇಶದಲ್ಲಿ ಸುಮಾರು 312 ದಂತ ವೈದ್ಯಕಿಯ ಕಾಲೇಜುಗಳಿದ್ದು, ಪ್ರತಿ ವರ್ಷ 25,000 ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಾರೆ. ಆದರೆ, ದಂತ ವೈದ್ಯಕಿಯ ಕೋರ್ಸ್​ ಪೂರ್ಣಗೊಳಿಸಿದವರಿಗೆಲ್ಲ ಉತ್ತಮವಾದ ವೃತ್ತಿ ಸಿಗುತ್ತಿಲ್ಲ. ಹಾಗಾಗಿ, ದಂತ ವೈದ್ಯಕಿಯ ಶಿಕ್ಷಣದಲ್ಲೇ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ತರಬೇತಿ ನೀಡುವಲ್ಲಿ ಮುಂದಾಗುವ ಅಗತ್ಯವಿದೆ ಎಂದು ತಿಳಿಸಿದರು.

10 ಸಾವಿರ ಮಂದಿಗೆ ಒಬ್ಬ ದಂತ ವೈದ್ಯ: ಗ್ರಾಮಾಂತರ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಬಾಯಿ ಕ್ಯಾನ್ಸರ್​ ಸೇರಿ ಅನೇಕ ಮಾರಕ ದಂತ ರೋಗಗಳು ಕಾಣಿಸಿಕೊಳ್ಳುತ್ತಿವೆ. ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ನುರಿತ ವೈದ್ಯರ ಕೊರತೆ ಇದೆ. ರಾಜ್ಯದಲ್ಲಿ ಸುಮಾರು 10 ಸಾವಿರ ಮಂದಿಗೆ ಓರ್ವ ದಂತ ವೈದ್ಯರಿದ್ದಾರೆಂಬುದು ಸಂಶೋಧನಾ ವರದಿಗಳಲ್ಲಿ ಬೆಳಕಿಗೆ ಬಂದಿದೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಉತ್ತಮ ದಂತ ಚಿಕಿತ್ಸೆ ಎಲ್ಲರಿಗೂ ಸಿಗಬೇಕೆಂಬ ಆಶಯದಿಂದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹೈಟೆಕ್​ ದಂತಾ ಚಿಕಿತ್ಸಾ ಕೇಂದ್ರ ಆರಂಭಿಸಿದೆ ಎಂದು ಪರಮೇಶ್ವರ ಹೇಳಿದರು.

ಆಸ್ಪತ್ರಗೆ ಬರುವ ರೋಗಿಗಳೊಂದಿಗೆ ವೈದ್ಯರ ಸಮಾಲೋಚನೆಯಲ್ಲಿ ಮತ್ತು ವರ್ತನೆಗಳಲ್ಲಿ ಬದಲಾವಣೆಗಳಾಗಬೇಕಿದೆ. ರೋಗಿಗಳೊಂದಿಗೆ ನಡೆಸಬೇಕಾದ ನುರಿತ ಕೌಶಲಗಳ ಕಲೆಗಾರಿಕೆಯ ಕಡೆಗೆ ವೈದ್ಯರು ಗಮನ ಹರಿಸುವ ಅಗತ್ಯವಿದೆ ಎಂದು ನವದೆಹಲಿಯ ಡೆಂಟಲ್​ ಕೌನ್ಸಿಲ್​ ಆಫ್​ ಇಂಡಿಯ ಸಂಸ್ಥೆ ಸದಸ್ಯ ಡಾ.ಶಿವಶರಣ ಶೆಟ್ಟಿ ತಿಳಿಸಿದರು.

ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಕನ್ಯಕಾ ಪರಮೇಶ್ವರ, ಡಾ.ಆನಂದ, ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಬಾಲಕೃಷ್ಣಶೆಟ್ಟಿ, ಪ್ರಾಂಶುಪಾಲ ಡಾ.ಪ್ರವಿಣ್​ ಕುಡುವ, ಉಪ ಪ್ರಾಂಶುಪಾಲ ಡಾ.ನಾಗಲ್ಮ ಚೌಧರಿ, ಡಾ.ಭಾರತೀಶ್​, ವೈದ್ಯಕಿಯ ಅಧೀಕ್ಷಕ ಡಾ.ಸಿ.ಪಿ ಸತೀಶ್​, ಸಾಹೇ ಕುಲಸಚಿವ ಡಾ.ಎಂ.ಝಡ್​ ಕುರಿಯನ್​, ಸಿಇಒ ಡಾ.ದೇವದಾಸ್​, ಶ್ರೀ ಸಿದ್ಧಾರ್ಥ ವೈದ್ಯಕಿಯ ಕಾಲೇಜಿನ ಪ್ರಾಂಶುಪಾಲ ಡಾ. ಸುಶಿಲ ಮಹಾಪಾತ್ರ, ಉಪ ಪ್ರಾಂಶುಪಾಲ ಡಾ. ಪ್ರಭಾಕರ್​, ಎಸ್​ಎಸ್​ಐಟಿ ಪ್ರಾಂಶುಪಾಲ ಡಾ.ಎಂ.ಎಸ್​.ರವಿಪ್ರಕಾಶ್​ ಇದ್ದರು.

ಕೇವಲ ತರಗತಿಯಿಂದ ಒಳ್ಳೆಯ ವೈದ್ಯರಾಗಲು ಸಾಧ್ಯವಿಲ್ಲ. ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಂಡು ಜ್ಞಾನವೃದ್ಧಿಸಿಕೊಳ್ಳಬೇಕು. ಸಂಶೋಧನೆ ಹಾಗೂ ಅಭಿವೃದ್ಧಿ ಕುರಿತು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿ. ವಿಚಾರ ಮಂಥನಗಳ ಮೂಲಕ ಉತ್ತಮ ಗುಣಮಟ್ಟದ ವೈದ್ಯರಾಗಲು ಶ್ರಮವಹಿಸುವ ಅಗತ್ಯವಿದೆ. > ಡಾ.ಜಿ.ಪರಮೇಶ್ವರ ಕುಲಾಧಿಪತಿ, ಸಾಹೇ ವಿಶ್ವವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net