

ಚಿತ್ರದುರ್ಗ: ದಂತ ವೈದ್ಯಕೀಯ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶ, ಉಜ್ವಲ ಭವಿಷ್ಯವಿದೆ ಎಂದು ಎಸ್‌ಜೆಎಂ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯ ಡಾ.ಎಂ.ಎಚ್.ರಘುನಾಥರೆಡ್ಡಿ ಸಲಹೆ ನೀಡಿದರು.
ಕಾಲೇಜಿನಲ್ಲಿ ಬುಧವಾರ 2024-2025ರ ಬ್ಯಾಚ್‌ನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಓರಿಯಂಟೇಶನ್ ಡೇ, ಬಿಳಿ ಕೋಟ್ ಧರಿಸುವ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಮಧ್ಯ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಜನಸೇವೆ ಒದಗಿಸುವಲ್ಲಿಯೂ ಸಂಸ್ಥೆಯ ಪಾತ್ರ ದೊಡ್ಡದಿದೆ ಎಂದರು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ, ಸದಸ್ಯರಾದ ಡಾ.ಬಸವಕುಮಾರ ಶ್ರೀ, ಡಾ.ಪಿ.ಎಸ್.ಶಂಕರ್, ಎಸ್.ಎನ್.ಚಂದ್ರಶೇಖರ್, ಕಾಲೇಜಿನ ಉಪ ಪ್ರಾಚಾರ್ಯೆ ಡಾ.ಹರಿಣಿ, ಡಾ.ಬೃಂದಾ, ಡಾ.ಚೈತ್ರಾ, ಡಾ.ಪ್ರೀತಿ, ಅನ್ನಪೂರ್ಣ, ಪಲ್ಲವಿ ಇತರರಿದ್ದರು.