

ಚಿತ್ತಾಪುರ: ನಿರಂತರ ಮಳೆ, ಬೆಣ್ಣೆತೋರೆ, ಚಂದ್ರAಪಳ್ಳಿ, ಮುಲ್ಲಾಮರಿ, ನಾಗರಾಳ ಜಲಾಶಯದಿಂದ ನೀರು ಹರಿ ಬಿಟ್ಟಿದ್ದರಿಂದ ದಂಡೋತಿಯ ಬಳಿ ಕಾಗಿಣಾ ನದಿಯ ಸೇತುವೆಯ ಕಾಂಕ್ರಿಟ್ ಕಿತ್ತುಕೋಗಿದ್ದು, ದುರಸ್ತಿ ಆಗುವರೆಗೆ ಸಂಚಾರ ಸ್ಥಗಿತವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ದಿನದಿಂದ ದಂಡೋತಿ ಮಾರ್ಗವಾಗಿ ಚಿತ್ತಾಪುರ- ಕಲಬುರಗಿ ಸಂಪರ್ಕ ಬಂದ್ ಆಗಿದ್ದು, ಪ್ರವಾಹ ಇಳಿದಿದ್ದು ಸೇತುವೆಯ ಸಿಮೆಂಟ್, ಡಾಂಬರ್ ಕಿತ್ತು ಗುಂಡಿಗಳು ಬಿದ್ದಿವೆ. ವಾಹನ ಚಲಿಸುವ ಸ್ಥಿತಿಯಲ್ಲಿ ಇಲ್ಲ. ಎರಡು ಕಡೆ ಪೊಲೀಸ್ ಸಿಬ್ಬಂದಿ ಕಾವಲಿಗಿದ್ದು, ಕಲಬುರಗಿಯಿಂದ ಚಿತ್ತಾಪುರಕ್ಕೆ ಬರುವವರು ಮಳಖೇಡ, ಶಹಾಬಾದ್, ಬಾಗೋಡೆ ಮೂಲಕ ಸಂಚರಿಸಲು ಕೋರಿದ್ದಾರೆ. ಸೇತುವೆ ಗಂಭೀರವಾಗಿ ಜಖಂ ಆಗಿದ್ದು, ಪ್ರವಾಹ ಕ್ಷೀಣಿಸಿದ ನಂತರ ದುರಸ್ತಿ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಡಬ್ಲೂಇ ಮಹ್ಮದ್ ಸಲೀಂ ತಿಳಿಸಿದ್ದಾರೆ.
ಹೊಸ ಸೇತುವೆಗೆ ಮನವಿ: ದಂಡೋತಿ ಬಳಿ ಕಾಗಿಣಾ ನದಿಗೆ ಐದು ದಶಕದ ಹಿಂದೆ ಸೇತುವೆ ನಿರ್ಮಾಣವಾಗಿದ್ದು, ಭಾಗಶಃ ಶಕ್ತಿ ಗುಂದಿದೆ. ಪದೇ ಪದೆ ಕಾಂಕ್ರಿಟ್ ಕಿತ್ತುತ್ತಿದೆ. ಸರ್ಕಾರ ಹೊಸ ಸೇತುವೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆ. ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಂಗಳವಾರ ಸೇತುವೆಯನ್ನುವೀಕ್ಷಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಚೇತನಕುಮಾರ ಪರಿಸೀಲಿಸಿದ್ದಾರೆ.